Friday, 22nd November 2024

ಖರ್ಗೋನ್‌ನಲ್ಲಿ ನಾಳೆ, ನಾಡಿದ್ದು ಕರ್ಪ್ಯೂ

ಭೋಪಾಲ್‌: ರಾಮ ನವಮಿ ವೇಳೆ ಕೋಮುಗಲಭೆ ನಡೆದಿದ್ದ ಮಧ್ಯಪ್ರದೇಶದ ಖರ್ಗೋನ್‌ನಲ್ಲಿ ಸೋಮವಾರ ಹಾಗೂ ಮಂಗಳವಾರ ಕರ್ಪ್ಯೂ ಘೋಷಿಸಲಾಗಿದೆ.

ಎರಡೂ ದಿನಗಳಂದು ಈದ್ ಆಚರಣೆ ನಡೆಯಲಿದ್ದು, ಸಂಪೂರ್ಣ ಕರ್ಪ್ಯೂ ಜಾರಿ ಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

‘ಮೇ 2 ಮತ್ತು ಮೇ 3 ರಂದು ಖರ್ಗೋನ್‌ನಲ್ಲಿ ಸಂಪೂರ್ಣ ಕರ್ಫ್ಯೂ ವಿಧಿಸಲಾಗುವುದು. ಈದ್ ಪ್ರಾರ್ಥನೆಗಳನ್ನು  ಮನೆ ಯಲ್ಲಿಯೇ ಸಲ್ಲಿಸಬೇಕು’ ಎಂದು ಖರ್ಗೋನ್‌ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.

ಅಂಗಡಿಗಳು ತೆರೆದಿರುತ್ತವೆ ಮತ್ತು ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ ಪಾಸ್ ನೀಡ ಲಾಗುವುದು ಎಂದು ಹೇಳಿದ್ದಾರೆ.

ಅಕ್ಷಯ ತೃತೀಯ ಮತ್ತು ಪರಶುರಾಮ ಜಯಂತಿಯಂದು ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮವನ್ನು ಆಯೋಜಿಸಲು ಅನುಮತಿ ಇಲ್ಲವೆಂದು ಎಂದು ಸಿಂಗ್ ತಿಳಿಸಿದ್ದಾರೆ.

ಕಳೆದ ತಿಂಗಳು ರಾಮ ನವಮಿ ಮೆರವಣಿಗೆಯ ವೇಳೆ ಕಲ್ಲು ತೂರಾಟ ನಡೆದಿತ್ತು ಹಾಗೂ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ 100ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿತ್ತು.