Sunday, 15th December 2024

ಗೋವಾದಲ್ಲಿ ಕರ್ಫ್ಯೂ ಕಾಲಾವಧಿ ಒಂದು ವಾರ ವಿಸ್ತರಣೆ

ಪಣಜಿ : ಗೋವಾದಲ್ಲಿ ಜಾರಿಯಲ್ಲಿದ್ದ ಕರ್ಫ್ಯೂ ಕಾಲಾವಧಿಯನ್ನು ಆಗಸ್ಟ್ 9 ರವರೆಗೆ ವಿಸ್ತರಣೆ ಮಾಡಲಾಗಿದೆ. ಕರೋನಾ ಮೂರನೇಯ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳ ಲಾಗಿದೆ.

ರಾಜ್ಯದಲ್ಲಿ ಬಾರ್ ಆಯಂಡ್ ರೆಸ್ಟೊರೆಂಟ್‍ ನನ್ನು ರಾತ್ರಿ 11 ಗಂಟೆಯ ವರೆಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಕ್ಯಾಸಿನೊ, ಸಿನೆಮಾ ಥಿಯೇಟರ್, ಸಭಾಗೃಹ, ರಿವರ್ ಕ್ರೂಜ್, ಶಾಪಿಂಗ್ ಮಾಲ್ ಗಳನ್ನು ತೆರೆಯಲು ಅವಕಾಶ ನೀಡಿಲ್ಲ.

ದೇಶದ ವಿವಿಧ ರಾಜ್ಯಗಳಲ್ಲಿ ಕೋವಿಡ್ 3 ನೇಯ ಅಲೆ ಆರಂಭಗೊಳ್ಳುವ ಭೀತಿಯ ಹಿನ್ನೆಲೆಯಲ್ಲಿ ಗೋವಾದಲ್ಲಿಯೂ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ಕರ್ಫ್ಯೂ ಕಾಲಾವಧಿಯನ್ನು ಆಗಸ್ಟ್ 9 ರ ವರೆಗೆ ವಿಸ್ತರಣೆ ಮಾಡಲಾಗಿದೆ.