ದೆಹಲಿ : ಸ್ಟಾಕ್ ಟ್ರೇಡಿಂಗ್ ಹಗರಣಗಳ ಮೂಲಕ ಸೈಬರ್ ವಂಚನೆಯಲ್ಲಿ ಭಾಗಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚೀನಾ ಪ್ರಜೆ (China Citizen) ಫಾಂಗ್ ಚೆಂಜಿನ್ ಎಂಬಾತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ವಾಟ್ಸಾಪ್ ಗುಂಪುಗಳ ಮೂಲಕ ಜನರನ್ನು ತನ್ನ ಬಲೆಗೆ ಬೀಳಿಸಿ ನಂತರ ವಂಚಿಸಿ ಹಣ ಪಡೆಯುತ್ತಿದ್ದ ಎಂದು ತಿಳಿದು ಬಂದಿದೆ. (Cyber Crime)
ಸ್ಟಾಕ್ ಮಾರ್ಕೆಟ್ ತರಬೇತಿ ಅವಧಿಯಲ್ಲಿ 43.5 ಲಕ್ಷ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದ ಸುರೇಶ್ ಕೋಳಿಚಿಯಿಲ್ ಅಚ್ಯುತನ್ ಎಂಬುವರು ಈ ಬಗ್ಗೆ ದೂರನ್ನು ನೀಡಿದ್ದರು. ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ ದೆಹಲಿ ಪೊಲೀಸರು ಫಾಂಗ್ ಚೆಂಜಿನ್ನನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.
ಹಗರಣವೇನು?
ವಂಚಕ, ಸ್ಟಾಕ್ ಮಾರ್ಕೆಟ್ ತರಬೇತಿ ಕೊಡುವುದಾಗಿ ಅಮಾಯಕರನ್ನು ಅವರಿಂದ ಹಣ ಹೂಡಿಕೆ ಮಾಡಿ ವಂಚಿಸುತ್ತಿದ್ದ. ಅದೇ ರೀತಿ ಸುರೇಶ್ ಕೋಳಿಚಿಯಿಲ್ ಅಚ್ಯುತನ್ ಎಂಬುವವರನ್ನು ನಂಬಿಸಿ ಅವರು ಜುಲೈ 24 ರಂದು 43.5 ಲಕ್ಷ ಹೂಡಿಕೆ ಮಾಡಿಸಿದ್ದ. ಹೂಡಿಕೆ ಮಾಡಿದ ಹಣ ಫಾಂಗ್ ಚೆಂಜಿನ್ ನಿಯಂತ್ರಿಸುವ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿತ್ತು.
ವಿಷಯ ತಿಳಿದ ಸಂತ್ರಸ್ತ ಪೊಲೀಸರ ಮೊರೆ ಹೋಗಿದ್ದರು ತನಿಖೆ ಆರಂಭಿಸಿದ ಪೊಲೀಸರು ಫಾಂಗ್ ಚೆಂಜಿನ್ ಮೊಬೈಲ್ ನಂಬರ್ ಹಾಗೂ ಬ್ಯಾಂಕ್ ಖಾತೆಯ ನಂಬರ್ ಟ್ರೇಸ್ ಮಾಡಿದ್ದರು. ಬ್ಯಾಂಕ್ ದೆಹಲಿಯ ಮುಂಡ್ಕಾದಲ್ಲಿ ಮಹಾಲಕ್ಷ್ಮಿ ಟ್ರೇಡರ್ಸ್ ಹೆಸರಿನಲ್ಲಿದೆ ಎಂದು ಪತ್ತೆ ಹಚ್ಚಿದರು. ನಂತರ ದೆಹಲಿಯ ಸಫ್ದರ್ಜಂಗ್ ಎನ್ಕ್ಲೇವ್ನಲ್ಲಿ ನೆಲೆಸಿರುವ ಚೀನೀ ಪ್ರಜೆ ಫಾಂಗ್ ಚೆಂಜಿನನ್ನು ಬಂಧಿಸಿದ್ದಾರೆ. ಬಂಧಿತನಿಂದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ವಾಟ್ಸಾಪ್ ಚಾಟ್ಗಳಲ್ಲಿ ಆತ ಸಹಚರರೊಂದಿಗೆ ಮಾಡಿದ್ದ ಚಾಟ್ಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : Cyber Crime: ವಿಮಾನ ನಿಲ್ದಾಣದ ಲಾಂಜ್ನಲ್ಲೂ ನಡೆಯುತ್ತದಾ ಸೈಬರ್ ಮೋಸ? 87,000 ರೂ. ಕಳೆದುಕೊಂಡ ಮಹಿಳೆ!
ದಿನ ಕಳೆದಂತೆ ಭಾರತದಲ್ಲಿ ಸೈಬರ್ ಕ್ರೈಂ ಪ್ರಕರಣ ಹೆಚ್ಚಾಗುತ್ತಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, ಕಳೆದ ವರ್ಷವೊಂದೇ ದೇಶದಲ್ಲಿ 11 ಲಕ್ಷ ರೂ. ಸೈಬರ್ ಕ್ರೈಂ ಪ್ರಕರಣ ದಾಖಲಾಗಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಹೆಚ್ಚಾಗಿ ವಯಸ್ಸಾದವರನ್ನು ಬಲೆಗೆ ಬೀಳಿಸುವ ವಂಚಕರು ಅವರಿಂದ ಹಣ ಸುಲಿಗೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ದೆಹಲಿ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವು ಮಹಾನಗರಗಳಲ್ಲಿ ಅತೀ ಹೆಚ್ಚು ಸೈಬರ್ ಕ್ರೈಂ ಪ್ರಕರಣ ದಾಖಲಾಗುತ್ತಿದೆ.
.