Saturday, 7th September 2024

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೋವಾಗೆ ದೌಡು

ಬೆಂಗಳೂರು: ಫಲಿತಾಂಶಕ್ಕೂ ಮುನ್ನವೇ ಸರ್ಕಾರ ರಚಿಸಲು ಕಾಂಗ್ರೆಸ್ ಹೈ ಕಮಾಂಡ್‌ ಸೂಚನೆಯಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೋವಾಗೆ ದೌಡಾಯಿಸಲಿದ್ದಾರೆ.

ವಿಶೇಷ ವಿಮಾನದ ಮೂಲಕ ಡಿಕೆಶಿ ಗೋವಾಗೆ ತೆರಳಲಿದ್ದು, ಎರಡು ದಿನಗಳ ಕಾಲ ಗೋವಾದಲ್ಲಿ ಬೀಡು ಬಿಡಲಿದ್ದಾರೆ. ಗೋವಾದಲ್ಲಿ ಈ ಬಾರಿ ಸರ್ಕಾರ ರಚಿಸುವ ನಿರೀಕ್ಷೆ ಯಲ್ಲಿ ಇದ್ದ ಕಾಂಗ್ರೆಸ್ ಗೆ ಎಕ್ಸಿಟ್ ಪೋಲ್ ಫಲಿತಾಂಶ ತಲೆನೋವಾಗಿ ಪರಿಣಮಿಸಿದೆ.

ಬಹುತೇಕ ಎಕ್ಸಿಟ್ ಪೋಲ್ ಗಳ ಪ್ರಕಾರ, ಗೋವಾದಲ್ಲಿ ಬಹುಮತ ಪಡೆಯಲು ಸಾಧ್ಯ ವಾಗದ ಪರಿಸ್ಥಿತಿ ಹಿನ್ನೆಲೆ ಅತಂತ್ರ ಆಗುವ ಲಕ್ಷಣ ಕಂಡುಬಂದಿತ್ತು. ಯಾವ ರಾಜ್ಯದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಲಕ್ಷಣ ತೋರಿಲ್ಲ. ಹೀಗಾಗಿ ಕಾಂಗ್ರೆಸ್ ಶತಾಯ ಗತಾಯ ಗೋವಾದಲ್ಲಿ ಸರ್ಕಾರ ರಚನೆಗೆ ಸರ್ಕಸ್ ನಡೆಸುತ್ತಿದೆ.

ಗೋವಾದ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಅವರಿಗೆ ಎಐಸಿಸಿ ಜವಾಬ್ದಾರಿ ನೀಡಿದೆ. ಹೀಗಿದ್ದರೂ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರನ್ನು ಗೋವಾಗೆ ತೆರಳಲು ಹೈಕಮಾಂಡ್ ಸೂಚನೆ ನೀಡಿದೆ.

ಮಾ.10ಕ್ಕೆ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲಿದೆ.

error: Content is protected !!