Monday, 16th September 2024

ದಲೈಲಾಮಾ ಮೇಲೆ ಬೇಹುಗಾರಿಕೆ: ಚೀನಿ ಮಹಿಳೆ ಬಂಧನ

ಗಯಾ: ಬೌದ್ಧ ಧರ್ಮಗುರು ದಲೈಲಾಮಾ ಅವರ ಮೇಲೆ ಬೇಹುಗಾರಿಕೆ ಮಾಡಲು ಬಂದಿದ್ದ ಚೀನಿ ಮಹಿಳೆಯನ್ನು ಕೊನೆಗೂ ಬಂಧಿಸಿರುವುದಾಗಿ ಪೋಲೀಸರು ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ದಲೈಲಾಮಾ ಬಿಹಾರದ ಗಯಾಕ್ಕೆ ತೆರಳಿದ್ದರು. ಆದರೆ ಚೀನಿ ಮಹಿಳೆಯೊಬ್ಬಳು ದಲೈಲಾಮಾ ಅವರ ವಿರುದ್ಧ ಬೇಹುಗಾರಿಕೆ ಮಾಡಲು ಬಂದಿದ್ದು, ಕಳೆದೊಂದು ವರ್ಷದಿಂದ ಗಯಾದ ಸಮೀಪದಲ್ಲಿಯೇ ವಾಸ ಮಾಡುತ್ತಿದ್ದಾಳೆ ಎಂದು ಗುಪ್ತವಚರ ಸಂಸ್ಥೆಗಳಿಗೆ ಮಾಹಿತಿ ಲಭಿಸಿತ್ತು. ಮಹಾರಾಣಿ ರಸ್ತೆಯ ಗೆಸ್ಟ್‌ ಹೌಸ್‌ ಒಂದರಲ್ಲಿ ಅಡಗಿಕೊಂಡಿದ್ದ ಆಕೆಯನ್ನು ಬಂಧಿಸಿರುವುದಾಗಿ ಪೋಲೀಸರು ಹೇಳಿದ್ದಾರೆ.

ವೀಸಾ ನಿಯಮ ಉಲ್ಲಂಘಿಸಿ ಆಕೆ 2019 ರಿಂದಲೂ ಭಾರತದಲ್ಲಿ ನೆಲೆಸಿದ್ದಳು. 2020ರಲ್ಲಿ ಆಕೆ ನಾಲ್ಕುದಿನ ನೇಪಾಳಕ್ಕೆ ಹೋಗಿ ನಂತರದಲ್ಲಿ ಮತ್ತೆ ಭಾರತಕ್ಕೆ ವಾಪಸ್ಸಾಗಿ ಮೆಕ್ಲಿ ಯೋಡ್ ಗಂಜ್‌ ನಲ್ಲಿ ನೆಲೆಸಿದ್ದಳು.

ಈಕೆಯನ್ನು ಸಾಂಗ್ ಕ್ಸಿಯೋಲನ್ ಎಂದು ಗುರುತಿಸಲಾಗಿದ್ದು, ಡಿ.22ರಂದು ದಲೈಲಾಮಾ ಬೊಧಗಯಾಗೆ ಪ್ರವಾಸ ಕೈಗೊಂಡ ಬೆನ್ನಲ್ಲೇ ಈ ಮಹಿಳೆಯೂ ಕೂಡ ಗಯಾಗೆ ಬಂದು ನೆಲೆಸಿದ್ದಳು ಎನ್ನಲಾಗಿದೆ.
Read E-Paper click here