Saturday, 23rd November 2024

ದಲೈಲಾಮಾಗೆ ‘ರೇಮನ್ ಮ್ಯಾಗ್ಸೆಸ್ಸೆ’ ಗೌರವ

ಧರ್ಮಶಾಲಾ: ಟಿಬೆಟಿಯನ್ ಧರ್ಮಗುರು 87 ವರ್ಷದ ದಲೈಲಾಮಾ ಅವರಿಗೆ ಪ್ರತಿಷ್ಠಿತ ‘ರೇಮನ್ ಮ್ಯಾಗ್ಸೆಸ್ಸೆ’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಮಾಗ್ಸೆಸ್ಸೆ ಪ್ರತಿಷ್ಠಾನದ ಸದಸ್ಯರು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿರುವ ದಲೈಲಾಮ ಅವರ ಕಚೇರಿಗೆ ಆಗಮಿಸಿ ಪ್ರಶಸ್ತಿ ಪ್ರದಾನ ಮಾಡಿದರು.

“ಇದು ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರಿಗೆ ದೊರಕಿದ ಮೊದಲ ಅಂತಾ ರಾಷ್ಟ್ರೀಯ ಪ್ರಶಸ್ತಿ ಎಂದು ಹೇಳಲಾಗಿದೆ. ಟಿಬೆಬ್ ಸಮುದಾಯದ ಬೌದ್ಧ ಧರ್ಮದ ರಕ್ಷಣೆ ಮತ್ತು ನಾಯಕತ್ವವನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಅವರನ್ನು ಪರಿಗಣಿಸ ಲಾಗಿದೆ” ಎಂದು ಅವರ ಕಚೇರಿಯ ಮೂಲಗಳು ತಿಳಿಸಿವೆ.

1957ರಲ್ಲಿ ನಿಧನರಾದ ಫಿಲಿಫೈನ್ಸ್ ಮಾಜಿ ಅಧ್ಯಕ್ಷ ರೇಮನ್ ಮ್ಯಾಗ್ಸೆಸ್ಸೆ ಅವರ ಹೆಸರಿನಲ್ಲಿ ಪ್ರತಿವರ್ಷ ಈ ಪ್ರಶಸ್ತಿ ನೀಡಲಾಗು ತ್ತದೆ. 2019ರಲ್ಲಿ ಪತ್ರಕರ್ತ ರವೀಶ್ ಕುಮಾರ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗಿತ್ತು. ನಾಯಕತ್ವ, ಶಾಂತಿ ಸ್ಥಾಪನೆ, ಸಾಹಿತ್ಯ, ಪತ್ರಿಕೋದ್ಯಮ, ಸಾಮಾಜಿಕ ನಾಯಕತ್ವ, ಸಾರ್ವಜನಿಕ ಸೇವೆ, ಸರ್ಕಾರಿ ಸೇವೆ ವಿಭಾಗಗಳಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ವಿನೋಬಾ ಭಾವೆ ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ.

ಮದರ್ ತೆರೇಸಾ, ಜಯಪ್ರಕಾಶ್ ನಾರಾಯಣ್, ಸತ್ಯಜಿತ್ ರೇ, ಎಂಎಸ್ ಸುಬ್ಬುಲಕ್ಷ್ಮಿ, ಕೆ.ವಿ. ಸುಬ್ಬಣ್ಣ, ರವಿಶಂಕರ್, ಕಿರಣ್ ಬೇಡಿ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು ಪಡೆದ ಪ್ರಮುಖರಾಗಿದ್ದಾರೆ.