Sunday, 15th December 2024

ದಲಿತ ವ್ಯಕ್ತಿಗೆ ಗುಂಪಿನಿಂದ ಹಲ್ಲೆ

ಜೈಸಲ್ಮೇರ್: ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ಮೇಲ್ಜಾತಿಯ ಜನರಿಗಾಗಿ ಮೀಸಲಿ ಟ್ಟಿದ್ದ ಮಡಕೆಯಿಂದ ನೀರು ಕುಡಿಯುತ್ತಿದ್ದ ದಲಿತ ವ್ಯಕ್ತಿಯ ಮೇಲೆ ಗುಂಪೊಂದು ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ಥಳಿಸಿದ ಘಟನೆ ನಡೆದಿದೆ.

ದಿಗ್ಗಾ ಗ್ರಾಮದಲ್ಲಿ ನಡೆದ ಘಟನೆಗೆ ಸಂಬಂಧಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಚತುರ ರಾಮ್ ತನ್ನ ಪತ್ನಿ ಯೊಂದಿಗೆ ಡಿಗ್ಗಾಗೆ ಹೋಗುತ್ತಿದ್ದಾಗ ಅವರು ಕಿರಾಣಿ ಅಂಗಡಿಯ ಬಳಿ ನಿಂತು ಅಂಗಡಿಯ ಹೊರಗೆ ಇಟ್ಟಿದ್ದ ಮಡಕೆಯಿಂದ ನೀರನ್ನು ಕುಡಿದರು.

ಮೇಲ್ಜಾತಿಯ ಜನರಿಗಾಗಿ ಇಟ್ಟಿದ್ದ ಮಡಕೆಯಿಂದ ನೀರು ಕುಡಿಯುತ್ತಿದ್ದಕ್ಕಾಗಿ ನಾಲ್ಕೈದು ಜನರು ಅವನನ್ನು ನಿಂದಿಸಿದರು ಮತ್ತು ಕಬ್ಬಿಣದ ರಾಡ್ಗಳು ಮತ್ತು ದೊಣ್ಣೆಗಳಿಂದ ಥಳಿಸಿ ದರು ಎಂದು ಪೊಲೀಸರು ತಿಳಿಸಿದ್ದಾರೆ. ರಾಮ್ ಅವರ ಒಂದು ಕಿವಿಯ ಹಿಂದೆ ಮತ್ತು ದೇಹದ ಇತರ ಭಾಗಗಳಿಗೆ ಗಾಯಗಳಾಗಿವೆ.