Sunday, 15th December 2024

ದಲಿತ ಮಹಿಳೆಯ ಮೇಲೆ ಪಾದ್ರಿ ಅತ್ಯಾಚಾರ

ರಾಜಸ್ಥಾನ: ರಾಜಸ್ಥಾನದ ಅಜ್ಮೀರ್‌ನಲ್ಲಿ ದಲಿತ ಮಹಿಳೆಯ ಮೇಲೆ ಪಾದ್ರಿ ಸೇರಿದಂತೆ ಕೆಲವೊಂದು ಗುಂಪು ಅತ್ಯಾಚಾರವೆಸಗಿದೆ ಎಂದು ಆರೋಪಿಸಲಾಗಿದೆ.

ಸಂಜಯ್ ಶರ್ಮಾ ಎಂಬ ಆರೋಪಿಯು ಮಹಿಳೆಯನ್ನು ಆಕೆಯ ಕುಟುಂಬದ ಅರ್ಚಕನಾಗಿದ್ದರಿಂದ ತಿಳಿದಿದ್ದನು ಮತ್ತು ಆಕೆಯ ಮನೆಯಲ್ಲಿ ಪ್ರಾರ್ಥನೆಗಳನ್ನು ಮಾಡುತ್ತಿದ್ದನು. ಮಹಿಳೆ ಮನೆಯಲ್ಲಿ ಒಬ್ಬಳೇ ಇದ್ದಾಗ ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

ಹಣ ವಸೂಲಿ ಮಾಡಿ ಮತ್ತೆ ಕೆಲವರ ಜೊತೆ ಸೇರಿ ಆಕೆಯನ್ನು ದಿನಗಟ್ಟಲೆ ಸೆರೆಯಲ್ಲಿಟ್ಟು ಅತ್ಯಾಚಾರ ಎಸಗಿದ್ದಾನೆ. ಪೊಲೀಸರಿಗೆ ದೂರು ನೀಡಿದರೆ ಆಕೆ ಹಾಗೂ ಆಕೆಯ ಪತಿ ಹಾಗೂ ಮಕ್ಕಳನ್ನು ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದರು.