ದಾಂತೇವಾಡ: ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಹುತಾತ್ಮ ಜವಾನರ ಮೃತ ದೇಹಗಳನ್ನು ಭುಜದ ಮೇಲೆ ಹೊರುವ ಮೂಲಕ ಅಂತಿಮ ನಮನ ಸಲ್ಲಿಸಿದರು.
ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ನಕ್ಸಲರ ದಾಳಿಗೆ ಬಲಿಯಾದ 11 ಮಂದಿ ಪೊಲೀಸರಿಗೆ ಅಂತಿಮವಾಗಿ ಎಲ್ಲಾ ರೀತಿಯ ಸಕಲ ಸರ್ಕಾರಿ ಗೌರವವನ್ನು ಸಲ್ಲಿಸಲಾ ಯಿತು.
ನಕ್ಸಲರ ದಾಳಿಯಲ್ಲಿ ಹುತಾತ್ಮರಾದ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದ ಸಿಎಂ ಯೋಧರ ಬಲಿದಾನ ವ್ಯರ್ಥವಾಗು ವುದಿಲ್ಲ. ಮಾವೋವಾದಿಗಳ ವಿರುದ್ಧದ ಹೋರಾಟ ವನ್ನು ತೀವ್ರಗೊಳಿಸಲಾಗುವುದು. ನಮ್ಮ ಯೋಧರು ತಮ್ಮ ಪ್ರಮುಖ ಪ್ರದೇಶಗಳಲ್ಲಿ ನಕ್ಸಲೀಯರಿಗೆ ಕಠಿಣ ಹೋರಾಟವನ್ನು ನೀಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ, ನಕ್ಸಲೀಯರ ಪ್ರಮುಖ ಪ್ರದೇಶಗಳಲ್ಲಿ 75 ಶಿಬಿರಗಳನ್ನು (ಭದ್ರತಾ ಪಡೆಗಳ) ಸ್ಥಾಪಿಸ ಲಾಗಿದೆ ಎಂದು ಹೇಳಿದರು.
ಬುಧವಾರ ಮಧ್ಯಾಹ್ನ ದಂತೇವಾಡದ ಅರನ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭದ್ರತಾ ಸಿಬ್ಬಂದಿ ಸಂಚರಿಸುತ್ತಿದ್ದ ಬೆಂಗಾವಲು ವಾಹನವನ್ನು ನಕ್ಸಲರು ಐಇಡಿಯಿಟ್ಟು ಸ್ಟೋಟಿಸಿದ್ದರು. ಪರಿಣಾಮ ಘಟನೆ ಯಲ್ಲಿ ಓರ್ವ ವಾಹನ ಚಾಲಕ, 10 ಮಂದಿ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದರು.