Sunday, 15th December 2024

ನಕ್ಸಲ್ ದಾಳಿಗೆ ಪ್ರಧಾನಿ ಮೋದಿ ತೀವ್ರ ಖಂಡನೆ

ದಾಂತೇವಾಡ: ಛತ್ತೀಸಗಢದಲ್ಲಿ ನಡೆದ ನಕ್ಸಲ್ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ.

ಟ್ವೀಟ್ ಮಾಡಿರುವ ಅವರು, ಛತ್ತೀಸಗಢದ ದಾಂತೇವಾಡದಲ್ಲಿ ಪೊಲೀಸರ ಮೇಲೆ ನಡೆದ ದಾಳಿಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಘಟನೆಯಲ್ಲಿ ಮೃತರಾದ ಪೊಲೀಸರಿಗೆ ನನ್ನ ಶ್ರದ್ದಾಂಜಲಿ. ಅವರ ತ್ಯಾಗ-ಬಲಿದಾನವನ್ನು ನಾವು ಸುಮ್ಮನೇ ಮರೆಯುವುದಿಲ್ಲ. ಮೃತರ ಕುಟುಂಬಗಳಿಗೆ ಸಂತಾಪಗಳು ಎಂದು ಹೇಳಿದ್ದಾರೆ.

ನಕ್ಸಲರು ಸುಧಾರಿತ ಐಇಡಿ ಸ್ಪೋಟಕ ಸಿಡಿಸಿದ್ದರಿಂದ ಛತ್ತೀಸಗಢ ರಾಜ್ಯ ಪೊಲೀಸ್ ಇಲಾಖೆಯ ದಾಂತೇವಾಡ ಜಿಲ್ಲಾ ಮೀಸಲು ಪೊಲೀಸ್ ಪಡೆಯ 10 ಪೊಲೀಸರು ಹುತಾತ್ಮ ರಾಗಿರುವ ಘಟನೆ ಅರನಾಪುರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ಘಟನೆಯಲ್ಲಿ ಪೊಲೀಸ್ ವ್ಯಾನ್‌ನ ಚಾಲಕ ಕೂಡ ಮೃತಪಟ್ಟಿದ್ದಾನೆ.

ಈ ಪೊಲೀಸರು ನಕ್ಸಲ್ ವಿರುದ್ಧದ ಕಾರ್ಯಾಚರಣೆ ಮುಗಿಸಿ ವಾಪಸ್ ವ್ಯಾನ್‌ನಲ್ಲಿ ಬರುವಾಗ ಇವರನ್ನು ಗೂಡ್ಸ್‌ ವಾಹನದಲ್ಲಿ ಹಿಂಬಾಲಿಸಿದ ನಕ್ಸಲರು ಐಇಡಿ ಸ್ಪೋಟಿಸಿ ದ್ದಾರೆ.

ಘಟನೆ ನಡೆದ ಸ್ಥಳ ಛತ್ತೀಸಗಢದ ರಾಜಧಾನಿ ರಾಯಪುರದಿಂದ 450 ಕಿಮೀ ದೂರದಲ್ಲಿದೆ.