Sunday, 8th September 2024

ಪಟಾಕಿ ಸಿಡಿಸಲು ಹೋಗಿ ಸಾವಿಗೀಡಾದ ಬಿಜೆಪಿ ಸಂಸದೆ ಮೊಮ್ಮಗಳು

ಪ್ರಯಾಗ್’ರಾಜ್: ದೀಪಾವಳಿ ಹಬ್ಬದಂದು  ಪಟಾಕಿ ಸಿಡಿಸಲು ಹೋಗಿ ಗಂಭೀರವಾಗಿ ಗಾಯಗೊಂಡಿದ್ದ ಬಿಜೆಪಿ ಸಂಸದೆ ರೀತಾ ಬಹುಗುಣ ಅವರ ಮೊಮ್ಮಗಳು ಸಾವನ್ನಪ್ಪಿದ್ದಾಳೆ.

ರೀತಾ ಬಹುಗುಣ ಅವರ ಪುತ್ರ ಮಾಯಾಂಕ್ ಜೋಷಿ ಪುತ್ರಿ 8 ವರ್ಷದ ಮಗು ದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿ ಹೊಡೆಯಲು ಆರಂಭಿಸಿದ್ದಳು. ಈ ವೇಳೆ ಗಾಯಗೊಂಡಿದೆ. ಶೇ.60ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದಳು.

ಬಾಲಕಿಯನ್ನು ಏರ್ ಆಯಂಬುಲೆನ್ಸ್ ಮೂಲಕ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ.

Leave a Reply

Your email address will not be published. Required fields are marked *

error: Content is protected !!