Sunday, 15th December 2024

ಎನ್.ಟಿ.ರಾಮರಾವ್ ನಾಲ್ಕನೇ ಪುತ್ರಿ ಆತ್ಮಹತ್ಯೆ

ಹೈದರಾಬಾದ್: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ಅವರ ನಾಲ್ಕನೇ ಪುತ್ರಿ ಕೆ ಉಮಾ ಮಹೇಶ್ವರಿ ಅವರು ಜುಬಿಲಿ ಹಿಲ್ಸ್ನಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉಮಾ ಮಹೇಶ್ವರಿ ಅವರು ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಕೆಲವು ತಿಂಗಳುಗಳಿಂದ ಚಿಕಿತ್ಸೆ ಪಡೆಯು ತ್ತಿದ್ದರು ಎಂದು ವರದಿಯಾಗಿದೆ. ಸೋಮವಾರ, ತನ್ನ ಮಲಗುವ ಕೋಣೆಯಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ವರದಿಯಾಗಿದೆ.

ಜುಬಿಲಿ ಹಿಲ್ಸ್ ಪೊಲೀಸರು ಶವವನ್ನು ಶವಪರೀಕ್ಷೆಗಾಗಿ ಸ್ಥಳಾಂತರಿಸಿದ್ದು, ಪ್ರಕರಣ ದಾಖಲಾಗಿದೆ.

ಆರೋಗ್ಯ ಸಮಸ್ಯೆಗಳ ಬಗ್ಗೆ ಖಿನ್ನತೆಗೆ ಜಾರಿದ್ದರಿಂದ ಅವರು, ತನ್ನ ಜೀವನವನ್ನು ಕೊನೆಗೊಳಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.