ಇದು ರಾಜಾ ರವಿವರ್ಮ ಅವರ ಅತ್ಯಂತ ಆಕರ್ಷಕ ವರ್ಣಚಿತ್ರಗಳಲ್ಲಿ ಒಂದರ ಪ್ರದರ್ಶನವಾಗಿದೆ.
ಇದು ತಿರುವಾಂಕೂರು ರಾಜಮನೆತನದ ಸಂಗ್ರಹ ದಲ್ಲಿ ಇಲ್ಲಿಯವರೆಗೆ ಪ್ರದರ್ಶನವಾಗದೇ ಇರುವ ಇರುವ ಕೃತಿ. 20ನೇ ಶತಮಾನದ ಭಾರತದ ಅತ್ಯಂತ ಪ್ರಭಾವಿ ಮಹಿಳೆ ಎಂದೇ ಖ್ಯಾತ ತಿರುವಾಂಕೂರಿನ ರಾಜಮನೆತನದಲ್ಲಿ ಕೊನೇ ಮಹಾರಾಣಿ ಹಾಗೂ ರಾಜಾ ರವಿವರ್ಮ ಅವರ ಹಿರಿಯ ಮೊಮ್ಮಗಳು ಮಹಾರಾಣಿ ಸೇತು ಲಕ್ಷ್ಮಿ ಬಾಯಿ (1895-1985) ಅವರ ಜೀವನ ಕಥೆಯನ್ನು ಈ ಚಿತ್ರಕಲಾ ಪ್ರದರ್ಶನ ಪ್ರಸ್ತುತಪಡಿಸಲಿದೆ.
ರಾಜಾ ರವಿವರ್ಮ ಹೆರಿಟೇಜ್ ಫೌಂಡೇಶನ್ ಏಪ್ರಿಲ್ 2024, ಬೆಂಗಳೂರು: ಚಿತ್ರ ಕಲಾ ಮಾಂತ್ರಿಕ ಮತ್ತು ರಾಷ್ಟ್ರೀಯ ಸಂಪತ್ತು ರಾಜಾ ರವಿವರ್ಮ ಅವರ 176ನೇ ಜನ್ಮ ದಿನಾಚರಣೆಯ ಸಂದರ್ಭ ದಲ್ಲಿ ರಾಜಾ ರವಿವರ್ಮ ಹೆರಿಟೇಜ್ ಫೌಂಡೇಶನ್ “ಡಾಟರ್ ಆಫ್ ಪ್ರಾವಿಡೆನ್ಸ್” ಎಂಬ ಚಿತ್ರಕಲಾ ಪ್ರದರ್ಶನ ವನ್ನು ಆಯೋಜಿಸಿದೆ. ತಿರುವಾಂಕೂರಿನ ರಾಜಮನೆತನದ ಕೊನೇ ಆಡಳಿತ ರಾಣಿಯಾಗಿದ್ದ ಮತ್ತು ರವಿವರ್ಮ ಅವರ ಹಿರಿಯ ಮೊಮ್ಮಗಳು ಮಹಾ ರಾಣಿ ಸೇತು ಲಕ್ಷ್ಮಿಬಾಯಿ (1895-1985) ಅವರ ಜೀವನ ಚರಿತ್ರೆಯನ್ನು ಈ ಪ್ರದರ್ಶನದಲ್ಲಿ ಪ್ರಸ್ತುತಪಡಿಸಲಾಗುತ್ತದೆ.
ರಾಜಾ ರವಿವರ್ಮ ಹೆರಿಟೇಜ್ ಫೌಂಡೇಶನ್, ಮೆಜ್ಜನೈನ್ ಲೆವೆಲ್, 38 ಮೈನಿ ಸದನ್, 7ನೇ ಅಡ್ಡರಸ್ತೆ, ಲ್ಯಾವೆಲ್ಲೆ ರಸ್ತೆ, ಬೆಂಗಳೂರು 560001 ನಲ್ಲಿ ಮೇ 30 ರವರೆಗೆ ಪ್ರದರ್ಶನ ನಡೆಯಲಿದೆ.
ಪ್ರದರ್ಶನವು ಮಹಾರಾಣಿ ಮತ್ತು ಅವರ ಜೀವನದ ಛಾಯಾಚಿತ್ರಗಳ ಸಂಗ್ರಹವನ್ನು ಒಳಗೊಂಡಿದೆ. ಇದನ್ನು ವಿವಿಧ ಅಧ್ಯಾಯಗಳಲ್ಲಿ ದೃಶ್ಯಾತ್ಮಕ ವಾಗಿ ನಿರೂಪಿಸಲಾಗಿದೆ. ಮಹಾರಾಣಿಯ ಮೊದಲ ಮೊಮ್ಮಗಳು, ರಾಜಾ ರವಿವರ್ಮ ಹೆರಿಟೇಜ್ ಫೌಂಡೇಶನ್ ಅಧ್ಯಕ್ಷೆಯೂ ಆಗಿರುವ ಭರಣಿ ತಿರುನಾಳ್ ರುಕ್ಮಿಣಿ ಬಾಯಿ ತಂಪುರನ್ ಅವರ ಭವ್ಯವಾದ ತೈಲ ವರ್ಣಚಿತ್ರವನ್ನೂ ಇಲ್ಲಿ ಪ್ರದರ್ಶಿಸಲಾಗುತ್ತದೆ.
ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ಮತ್ತು ಸಿಇಒ ಗೀತಾಂಜಲಿ ಮೈನಿ ಮಾತನಾಡಿ ಪ್ರದರ್ಶನದ ಕುರಿತು ಮಾತನಾಡಿ “ರಾಜಾ ರವಿವರ್ಮ ಅವರ ಕಲಾಕೃತಿಗಳ ದಾಖಲೀಕರಣ ಮತ್ತು ಸಂರಕ್ಷಣೆಯ ಮೇಲೆ ಫೌಂಡೇಶನ್ ಗಮನ ಕೇಂದ್ರೀಕೃತವಾಗಿರುವ ಹೊರತಾಗಿಯೂ ಎಂದೆಂದಿಗೂ ನೋಡದ, ದಾಖಲಿಸಲಾಗ ಹಾಗೂ ಸಂಶೋಧನೆಗೆ ಒಳಪಡದ, ಪ್ರಕಟವಾಗದ ಅವರು ವರ್ಣಚಿತ್ರಗಳನ್ನುಬಗ್ಗೆ ಮಾತನಾಡುವಂತೆ ಮಾಡುವುದು ಹಾಗೂ ಜಗತ್ತೇ ನೋಡುವಂತೆ ಪ್ರದರ್ಶಿಸುವುದು ಪ್ರತಿಷ್ಠಾನದ ಜವಾಬ್ದಾರಿಯಾಗಿದೆ ಮೂರು ವರ್ಷದ ಹುಡುಗಿಯಾಗಿದ್ದ ಮಹಾರಾಣಿ ಸೇತು ಲಕ್ಷ್ಮಿಬಾಯಿ ಅವರ ಈ ವರ್ಣಚಿತ್ರವು ಅಂತಹ ಒಂದು ಅಪರೂಪದ ಕೃತಿಯಾಗಿದ್ದು, ರಾಜಾ ರವಿವರ್ಮ ಮತ್ತು ಅವರ ಕೆಲಸದ ಬಗ್ಗೆ ಪ್ರೀತಿ ಹೊಂದಿರುವ ಎಲ್ಲರೂ ಮಾತನಾಡುವಂತಾಗಬೇಕು ಮತ್ತು ಹಂಚಿಕೊಳ್ಳುವಂತಾಗಬೇಕು ಎಂದು ಹೇಳಿದರು.
ತಿರುವಾಂಕೂರು ಮತ್ತು ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾದ ಮಹಾರಾಣಿ ಸೇತು ಲಕ್ಷ್ಮಿಬಾಯಿ ಕುರಿತು ರಚಿಸಿದ ಭವ್ಯ ವರ್ಣಚಿತ್ರವನ್ನು ಪ್ರದರ್ಶಿಸುವುದೇ ರಾಜ ರವಿವರ್ಮ ಅವರ 176 ನೇ ಜನ್ಮ ದಿನಾಚರಣೆಯನ್ನು ಆಚರಿಸಲು ಸೂಕ್ತ ವಿಧಾನ ಎಂಬುದು ನಮ್ಮ ನಂಬಿಕೆ ಎಂಬುದಾಗಿ ಗೀತಾಂಜಲಿ ಮೈನಿ ಅವರು ಹೇಳಿದರು.
ಬೆಂಗಳೂರಿನ ರಿಚ್ಮಂಡ್ ರಸ್ತೆಯಲ್ಲಿ ಶಾಂತಿಯುತವಾಗಿ ಕಳೆದ ಮಹಾರಾಣಿಯ ಶೈಶವಾವಸ್ಥೆಯಿಂದ ಕೊನೆಯ ದಿನಗಳವರೆಗಿನ ಜೀವನವನ್ನು ಈ ಚಿತ್ರ ಪ್ರದರ್ಶನವು ಬೆಳಕು ಚೆಲ್ಲುತ್ತದೆ. ಅವರು ತಿರುವಾಂಕೂರನ್ನು ಆಳ್ವಿಕೆ ಮಾಡಿ ಸುಧಾರಣೆಗಳು ತಂದು ಮತ್ತು ಬುದ್ಧಿವಂತ ಆಡಳಿತದ ಮೂಲಕ ಇತಿಹಾಸವನ್ನು ನಿರ್ಮಿಸಿದ್ದರು.
ಅವರು ತಮ್ಮ ಸಿಂಹಾಸನವನ್ನು ತ್ಯಜಿಸಿದ ನಂತರ ತಮ್ಮ ದಿನಗಳನ್ನು ಕಳೆಯಲು ನಮ್ಮ ನಗರವನ್ನು ಆಯ್ಕೆ ಮಾಡಿಕೊಂಡಿದ್ದರು. ಇದರಿಂದಾಗಿ ಅವರನ್ನು ಮತ್ತು ಅವರ ಪ್ರತಿಭಾವಂತ ಅಜ್ಜ ರಾಜಾ ರವಿವರ್ಮ ಅವರನ್ನು ನೆನಪಿಸಿಕೊಳ್ಳುವುದು ನಮ್ಮ ಪಾಲಿಗೆ ಸೂಕ್ತ ನಿರ್ಧಾರವಾಗಿದೆ. ಈ ರೀತಿಯ ಪ್ರದರ್ಶನಗಳು ಮತ್ತು ಕಾರ್ಯಕ್ರಮಗಳ ಮೂಲಕ, ಫೌಂಡೇಶನ್ ಮಾಡುವ ಕೆಲಸದ ಕುರಿತು ಸಂದೇಶಗಳನ್ನು ಹರಡಲು ಮತ್ತು ರಾಜಾ ರವಿವರ್ಮ ಅವರ ಕೆಲಸವನ್ನು ದಾಖಲಿಸಲು ಮತ್ತು ಸಂರಕ್ಷಿಸುವುದಕ್ಕೆ ನಮ್ಮ ಸಹಾಯ ಪಡೆಯುವಂತೆ ಹೆಚ್ಚು ಹೆಚ್ಚು ಸಂಗ್ರಾಹಕರನ್ನು ಪ್ರೋತ್ಸಾಹಿ ಸುವುದೇ ನಾವು ಆಶಯ ಎಂದು ಗೀತಾಂಜಲಿ ಮೈನಿ ಹೇಳಿದರು.
ಮಹಾರಾಣಿ ಕುರಿತು
ತಿರುವಾಂಕೂರಿನ ಮಹಾರಾಣಿ ಸೇತು ಲಕ್ಷ್ಮಿಬಾಯಿ ಇಪ್ಪತ್ತನೇ ಶತಮಾನದ ಭಾರತದ ಅತ್ಯಂತ ಗಮನಾರ್ಹ ಮಹಿಳಾ ಐಕಾನ್ ಗಳಲ್ಲಿ ಒಬ್ಬರು. ಮಹಾತ್ಮ ಗಾಂಧಿಯವರಂತಹ ರಾಷ್ಟ್ರೀಯವಾದಿಗಳು ಮತ್ತು ಲಾರ್ಡ್ ಮೌಂಟ್ಬ್ಯಾಟನ್ ಅವರಂತಹ ವಸಾಹತುಶಾಹಿ ಯುಗದ ವ್ಯಕ್ತಿಗಳಿಂದ ಸಮಾನವಾಗಿ ಮೆಚ್ಚುಗೆ ಪಡೆದ ಅವರು 1924-31ರ ನಡುವೆ ತಿರುವಾಂಕೂರನ್ನು ಆಳಿದ ಏಳು ವರ್ಷಗಳು ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮೃದ್ಧಿಯ ಹೊಸ ಮಾನದಂಡಗಳು ಸೃಷ್ಟಿಯಾಗಿದ್ದವು. ಅವರು ಮಹಿಳೆಯರನ್ನು ಉನ್ನತ ಸ್ಥಾನಗಳಿಗೆ ನೇಮಿಸಿದರು ಮತ್ತು ಅವರ ರಾಜ್ಯದ ಶಾಸಕಾಂಗದ ಬಾಗಿಲುಗಳನ್ನು ಅವರಿಗಾಗಿ ಮುಕ್ತವಾಗಿಟ್ಟರು. ಅವರು ಜಾತಿ ಅನಾನುಕೂಲತೆಗಳನ್ನು ತೊಡೆದುಹಾಕಲು ಕೌಶಲಕ್ಕೆ ಮನ್ನಣೆ ನೀಡಿದರು ಮತ್ತು ಕೇರಳದಲ್ಲಿ ಮೊದಲ ಚಲನಚಿತ್ರದ ತಯಾರಿಕೆಯನ್ನು ಸಹ ಬೆಂಬಲಿಸಿದ್ದರು.
ಸಾಮಾನ್ಯವಾಗಿ ಭಾರತೀಯ ರಾಜಮನೆತನವನ್ನು ಅನುಕೂಲಕರವಾಗಿ ನೋಡದ ಬ್ರಿಟಿಷರು ಸಹ, ಸೇತು ಲಕ್ಷ್ಮಿಬಾಯಿ ಒಬ್ಬ ಪ್ರತಿಭಾವಂತ ಆಡಳಿತಗಾರರಾಗಿದ್ದರು ಹಾಗೂ ಇದು ಅವರ ಪ್ರಜೆಗಳಿಗೆ “ಅಸಾಧಾರಣ ಸಮೃದ್ಧಿಯನ್ನು” ತಂದಿದೆ ಎಂಬುದನ್ನು ಒಪ್ಪಿಕೊಂಡಿದ್ದರು. ಈ ಎಲ್ಲದರ ನಡುವೆಯೂ, ಅವರು ವೈಯಕ್ತಿಕವಾಗಿ ವಿನಮ್ರ ಮತ್ತು ಸ್ವಾಭಿಮಾನಿಯಾಗಿಯೇ ಉಳಿದರು. ಕಾಲಚಕ್ರದ ಉರುಳುವಿಕೆ ಮತ್ತು ಭಾರತದಲ್ಲಿ ಪ್ರಜಾಪ್ರಭುತ್ವದ ಉದಯವಾಗುತ್ತಿದ್ದಂತೆ ಅವರು ಬದಲಾವಣೆಯನ್ನು ಸೌಜನ್ಯದಿಂದ ಸ್ವೀಕರಿಸಿಕೊಂಡಿದ್ದರು.
1950 ರ ದಶಕದಲ್ಲಿ ಅವರು ಅರಮನೆಯಿಂದ ದೂರ ಸರಿದು, ಶಾಶ್ವತವಾಗಿ ಬೆಂಗಳೂರಿಗೆ ಸ್ಥಳಾಂತರಗೊಂಡರು. ಅವರು ಗತಕಾಲದಲ್ಲಿ ಹೊಂದಿದ್ದ ಅರ್ಧ ಡಜನ್ ಬಿರುದುಗಳನ್ನು ತ್ಯಜಿಸಿ, ಸರಳವಾಗಿ “ಶ್ರೀಮತಿ ಸೇತು ಲಕ್ಷ್ಮಿ ಬಾಯಿ” ಆದರು. ಅವರು 1985 ರಲ್ಲಿ ಸಾಮಾನ್ಯ ನಾಗರಿಕರಾಗಿ ನಿಧನ ರಾದರು. ಅವರ ಜೀವನವು ತಿರುವುಗಳ್ನು ಕಂಡಿತ್ತು ಮತ್ತು ಅವರು ನ್ಯಾಯಾಲಯದ ಮೆಟ್ಟಿಲೇರಿದ್ದ ಹಲವಾರು ಒಳಸಂಚುಗಳ ವಿರುದ್ಧ ಹೋರಾಡಿ ದ್ದರು. ಅವರ ತಮ್ಮ ಜೀವನ ಕತೆಗೆ ಬಹುತೇಕ ಸಿನಿಮೀಯ ರೀತಿಯಲ್ಲಿ ಸಾಗಿತ್ತು. ಮಾತೃಪ್ರಧಾನ ವ್ಯವಸ್ಥೆಯಲ್ಲಿ ಅಧಿಕಾರವನ್ನು ಚಲಾಯಿಸಿದ್ದ ಕೊನೆಯ ರಾಣಿಯಾಗಿದ್ದ ಸೇತು ಲಕ್ಷ್ಮೀ ಬಾಯಿ ಅವರನ್ನು ಅಧಿಕಾರದಲ್ಲಿದ್ದಾಗ “ಮಹಾರಾಜ” ಎಂದು ಕರೆಯಲಾಗುತ್ತಿತ್ತು.
ತಮ್ಮ ಆಡಳಿತದ ಉಚ್ಛ್ರಾಯ ಕಾಲದಲ್ಲಿ, ಅವರು ರವೀಂದ್ರನಾಥ ಟ್ಯಾಗೋರ್ ರಿಂದ ಹಿಡಿದು ಇಟಾಲಿಯನ್ ಸರ್ವಾಧಿಕಾರಿಯ ಮಗಳು ಎಡ್ಡಾ ಮುಸೊಲಿನಿಯಂತಹ ವ್ಯಕ್ತಿಗಳನ್ನು ಭೇಟಿಯಾಗಿದ್ದರು. ಅವರದ್ದು ಶ್ರೀಮಂತ, ಘಟನಾತ್ಮಕ, ಆಕರ್ಷಕ ಜೀವನವಾಗಿತ್ತು, ಈ ಕಲಾ ಪ್ರದರ್ಶನವು ಅವುಗಳಿಗೆ ಗೌರವ ಸಲ್ಲಿಸಲಿದೆ. 2024ರ ಏಪ್ರಿಲ್ 27ರಂದು ಸಂಜೆ 6.30ಕ್ಕೆ ಮಹಾರಾಣಿ ಸೇತು ಲಕ್ಷ್ಮೀಬಾಯಿ ಮತ್ತು ಭಾರತೀಯ ಇತಿಹಾಸದಲ್ಲಿ ಅವರ ಮಹತ್ವದ ಕುರಿತು ಡಾ.ಮನು ಎಸ್.ಪಿಳ್ಳೈ ಅವರಿಂದ ವಿಶೇಷ ಉಪನ್ಯಾಸ ಆಯೋಜನೆಗೊಂಡಿದೆ.
ರಾಜಾ ರವಿವರ್ಮ ಹೆರಿಟೇಜ್ ಫೌಂಡೇಶನ್ ಬಗ್ಗೆ:
ರಾಜಾ ರವಿವರ್ಮ ಹೆರಿಟೇಜ್ ಫೌಂಡೇಶನ್ ಒಂದು ಲಾಭೇತರ ಸಂಸ್ಥೆಯಾಗಿದ್ದು, ಇದು ಭಾರತದ ಶ್ರೇಷ್ಠ ಕಲಾವಿದರಲ್ಲಿ ಒಬ್ಬರಾಗಿರುವ ರವಿವರ್ಮ ಅವರ ಕಲಾತ್ಮಕ ಪರಂಪರೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಕೆಲಸ ಮಾಡುತ್ತದೆ. 2015 ರಲ್ಲಿ ಅವರ ದೊಡ್ಡ, ಮೊಮ್ಮಗಳು ಭರಣಿ ತಿರುನಾಳ್ ರುಕ್ಮಿಣಿ ಬಾಯಿ ತಂಪುರನ್ ಅವರು ಪ್ರಾರಂಭಿಸಿದ ಫೌಂಡೇಶನ್ನ ಚಟುವಟಿಕೆಗಳನ್ನು ಕಲೆ, ಇತಿಹಾಸ, ಸಂರಕ್ಷಣೆ ಮತ್ತು ಉದ್ಯಮ ಕ್ಷೇತ್ರದ ಬಾಹ್ಯ ಮತ್ತು ಆಂತರಿಕ ಸಲಹೆಗಾರರನ್ನು ಒಳಗೊಂಡ ತಜ್ಞ ಸಮಿತಿಯ ಮಾರ್ಗದರ್ಶನವನ್ನು ಪಡೆದುಕೊಂಡಿದೆ.
ರವಿವರ್ಮ ಮತ್ತು ಅವರ ಕಲಾಕೃತಿಗಳಿಗೆ ಸಂಬಂಧಿಸಿದಂತೆ ಸಂಶೋಧನೆ, ದಾಖಲೀಕರಣ, ದೃಢೀಕರಣ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ವಿಶ್ವದ ಏಕೈಕ ಸಂಸ್ಥೆ ರಾಜಾ ರವಿ ವರ್ಮ ಫೌಂಡೇಶನ್. ಫೌಂಡೇಶನ್ ಸಾರ್ವಜನಿಕ ಮತ್ತು ಖಾಸಗಿ ವಸ್ತುಸಂಗ್ರಹಾಲಯಗಳು, ಸಂಗ್ರಾಹಕರು ಮತ್ತು ಈ ಅಪೂರ್ವ ಕಲಾವಿದರ ಕಲಾ ಕೃತಿಗಳನ್ನು ಹೊಂದಿರುವ ಸಂಗ್ರಹಾಲಯಗಳೊಂದಿಗೆ ಕೆಲಸ ಮಾಡುತ್ತದೆ.