Thursday, 19th September 2024

ಜ-ಕಾಶ್ಮೀರದಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿ ಮೊದಲ ಹಂತದ ಚುನಾವಣೆ ಆರಂಭ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿಯ ಮೊದಲ ಹಂತದ ಚುನಾವಣೆ ಶನಿವಾರ ಆರಂಭ ವಾಗಿದೆ.

ಪೀಪಲ್ಸ್ ಅಲೈಯನ್ಸ್ ಫಾರ್‌ ಗುಪ್ಕರ್ ಡಿಕ್ಲರೇಷನ್‌ (ಪಿಎಜಿಡಿ), ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ), ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷಗಳ (ಪಿಡಿಪಿ) ಅಭ್ಯರ್ಥಿಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಬಿಜೆಪಿ ಮತ್ತು ಮಾಜಿ ಹಣಕಾಸು ಸಚಿವ ಅಲ್ತಾಫ್‌ ಬುಖಾರಿ ಅವರ ಅಪ್ನಿ ಪಾರ್ಟಿ ಕೂಡ ಕಣದಲ್ಲಿದೆ.

ಡಿಡಿಸಿ, ‍ಪಂಚಾಯತ್‌ ಉಪಚುನಾವಣೆ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಎಂಟು ಹಂತಗಳಲ್ಲಿ ನಡೆಯಲಿವೆ. ಶನಿವಾರ ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮೊದಲ ಹಂತದ ಚುನಾವಣೆಯಲ್ಲಿ 1,475 ಅಭ್ಯರ್ಥಿಗಳು ಕಣದಲ್ಲಿದ್ದಾರೆ‌. ಜಮ್ಮುವಿನ 18 ಮತ್ತು ಕಾಶ್ಮೀರದ 25 ಸ್ಥಾನಗಳು ಸೇರಿದಂತೆ ಡಿಡಿಸಿಯ ಒಟ್ಟು 43 ಕ್ಷೇತ್ರಗಳಿಗಾಗಿ ಇಂದು ಮತದಾನ ನಡೆಯುತ್ತಿದೆ.

ಪಂಚಾಯತ್‌ಗಳ ಉಪಚುನಾವಣೆಯಲ್ಲಿ 899 ಅಭ್ಯರ್ಥಿಗಳು ‘ಪಂಚ್‌’ ಸ್ಥಾನಗಳಿಗಾಗಿ ಮತ್ತು 280 ಮಂದಿ ‘ಸರ್ಪಂಚ್’ ಸ್ಥಾನ ಗಳಿಗೆ ಸ್ಪರ್ಧಿಸಿದ್ದಾರೆ. ಮೊದಲ ಹಂತದ ಚುನಾವಣೆಗಾಗಿ 2,644 ಮತಗಟ್ಟೆಗಳಲ್ಲಿ ನಡೆಯಲಿದ್ದು, ಅಗತ್ಯ ಚುನಾವಣಾ ಅಧಿಕಾರಿ ಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

 

Leave a Reply

Your email address will not be published. Required fields are marked *