Thursday, 31st October 2024

Deepavali 2024: ದೀಪಾವಳಿಯಂದು ನಿಮ್ಮ ಚರ್ಮ, ಕೂದಲಿನ ಆರೈಕೆ ಮಾಡಲು ಈ ಸಲಹೆ ಪಾಲಿಸಿ

Deepavali 2024

ದೀಪಾವಳಿ (Deepavali 2024) ಹಬ್ಬದ ಸಮಯದಲ್ಲಿ ಎಲ್ಲಾ ಕಡೆ ಜನರು ಪಟಾಕಿಗಳನ್ನು ಸಿಡಿಸಿ ಸಂಭ್ರಮಪಡುತ್ತಾರೆ. ಇದರಿಂದ ವಾತಾವರಣದಲ್ಲೆಲ್ಲಾ ಕಲುಷಿತ ಹೊಗೆ ತುಂಬಿಕೊಳ್ಳುತ್ತದೆ ಇಂತಹ ಮಾಲಿನ್ಯಕಾರಕ ಗಾಳಿಯನ್ನು ಉಸಿರಾಡಿದಾಗ ನಮ್ಮ ಆರೋಗ್ಯ ಕೆಡುವುದು ಮಾತ್ರವಲ್ಲ ಇದರಿಂದ ನಮ್ಮ ಕೂದಲು ಹಾಗೂ ಚರ್ಮ ಕೂಡ ಹಾನಿಗೊಳಗಾಗುತ್ತದೆ. ಹಾಗಾಗಿ ಇಂತಹ ಕಲುಷಿತ ವಾತಾವರಣದಲ್ಲಿ ನಮ್ಮ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಸಲಹೆ ಪಾಲಿಸಿ.

ದೀಪಾವಳಿಗೆ  ಚರ್ಮದ ಆರೈಕೆ

ಹೈಡ್ರೇಟ್ ಆಗಿರಿ:

ನಿಮ್ಮ ಚರ್ಮವನ್ನು ಹೈಡ್ರೇಟ್ ಆಗಿಡಲು ಮತ್ತು ಶುಷ್ಕತೆಯನ್ನು ತಡೆಯಲು ಹಬ್ಬದ ಸಮಯದಲ್ಲಿ ಸಾಕಷ್ಟು ನೀರು ಕುಡಿಯಿರಿ.

ಪೋಷಕಾಂಶ ಭರಿತ ಆಹಾರ:

ಹಣ್ಣುಗಳು, ತರಕಾರಿಗಳು ಮತ್ತು ಬೀಜಗಳಂತಹ ಆ್ಯಂಟಿ ಆಕ್ಸಿಡೆಂಟ್‍ಗಳು  ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ.  ಇದು ಮಾಲಿನ್ಯ ಮತ್ತು ಫ್ರೀ ರಾಡಿಕಲ್‍ಗಳಿಂದ ಉಂಟಾಗುವ ಹಾನಿಯಿಂದ ನಿಮ್ಮ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಅತಿಯಾದ ಸಕ್ಕರೆ ಸೇವನೆಯನ್ನು ತಪ್ಪಿಸಿ:

ಅತಿಯಾದ ಸಕ್ಕರೆ ಸೇವನೆಯು ಚರ್ಮದ ವಯಸ್ಸಾಗುವಿಕೆ ಮತ್ತು ಮೊಡವೆಗಳಿಗೆ ಕಾರಣವಾಗಬಹುದು. ಹಾಗಾಗಿ ಹಬ್ಬದ ಸಮಯದಲ್ಲಿ ಸಕ್ಕರೆ ಸಿಹಿತಿಂಡಿಗಳು ಮತ್ತು ಪಾನೀಯಗಳ ಸೇವನೆಯನ್ನು ಮಿತಿಗೊಳಿಸಿ.

ಸನ್‍ಸ್ಕ್ರೀನ್ ಹಚ್ಚಿ:

ಇದು ಸೂರ್ಯನ ಹಾನಿಕಾರಕ ಕಿರಣಗಳಿಂದ ಮಾತ್ರವಲ್ಲ ಮಾಲಿನ್ಯಕಾರಕಗಳಿಂದ ಕೂಡ ಚರ್ಮವನ್ನು ರಕ್ಷಿಸುತ್ತದೆ. ಹಾಗಾಗಿ ದೀಪಾವಳಿಯನ್ನು ಆಚರಿಸುವ ದಿನ 30 ಅಥವಾ ಅದಕ್ಕಿಂತ ಹೆಚ್ಚಿನ ಎಸ್‌ಪಿಎಫ್‌ ಹೊಂದಿರುವ ಸನ್‌ಸ್ಕ್ರೀನ್‌ ಚರ್ಮಕ್ಕೆ ಹಚ್ಚಿ.

ಸ್ವಚ್ಛ ಮಾಡಿ:

ಹಬ್ಬ ಮುಗಿದ ತಕ್ಷಣ ಮುಖವನ್ನು ಸ್ವಚ್ಛಗೊಳಿಸುವುದನ್ನು ತಪ್ಪಿಸಬೇಡಿ. ಇದು ಚರ್ಮದ ಮೇಲೆ ಕುಳಿತ ಹಾನಿಕಾರಕಗಳನ್ನು ತೊಲಗಿಸುತ್ತದೆ.

ದೀಪಾವಳಿಗೆ ಕೂದಲಿನ ಆರೈಕೆ ಹೇಗೆ?

ಸರಿಯಾದ ಕೇಶವಿನ್ಯಾಸ:

ನಿಮ್ಮ ಕೂದಲು ಮಾಲಿನ್ಯಕ್ಕೆ ಒಳಗಾಗುವಂತಹ ಸ್ಥಳಕ್ಕೆ ನೀವು ಹೋಗುವಾಗ ಕೂದಲನ್ನು ಬಿಚ್ಚಿಕೊಳ್ಳುವ ಬದಲು ಅದನ್ನು ಸರಿಯಾಗಿ ಕಟ್ಟಿಕೊಳ್ಳಿ. ಇದು ಮಾಲಿನ್ಯಗಳಿಂದ ಕೂದಲನ್ನು ಕಾಪಾಡುತ್ತದೆ.

ಸಾಫ್ಟ್‌ ಶಾಂಪೂಗಳು:

ಹಬ್ಬ ಮುಗಿದ ನಂತರ ಕೂದಲಿಗೆ ಸಾಫ್ಟ್‌ ಆದ ಸಾಂಪೂ ಬಳಸಿ ವಾಶ್ ಮಾಡಿ. ಇದು ಕೂದಲಿನ ಮೇಲಿದ್ದ ಮಾಲಿನ್ಯಕಾರಕಗಳನ್ನು ನಿವಾರಿಸುತ್ತದೆ.

ಡೀಪ್ ಕಂಡೀಷನಿಂಗ್:

ವಾತಾವರಣದ ಮಾಲಿನ್ಯಗಳಿಂದ  ಉಂಟಾಗುವ ಯಾವುದೇ ಹಾನಿಯನ್ನು ಸರಿಪಡಿಸಲು ನಿಮ್ಮ ಕೂದಲನ್ನು ಆಳವಾದ ಕಂಡೀಷನಿಂಗ್ ಮಾಡಿ.

ಇದನ್ನೂ ಓದಿ:ದೀಪಾವಳಿಯಂದು ಇದನ್ನೆಲ್ಲ ಸೇವಿಸಿ ತಲೆ ಸಿಡಿಯುತ್ತಿದ್ದರೆ ಇಲ್ಲಿದೆ ನೋಡಿ ಪರಿಹಾರ!

ಈ ಸಲಹೆಗಳನ್ನು ಅನುಸರಿಸುವ ಮೂಲಕ, ದೀಪಾವಳಿ ಹಬ್ಬಕ್ಕೆ  ಆರೋಗ್ಯಕರ ಚರ್ಮ ಮತ್ತು ಕೂದಲನ್ನು ಕಾಪಾಡಿಕೊಳ್ಳಲು ನಿಮಗೆ  ಸಾಧ್ಯವಾಗುತ್ತದೆ ಮತ್ತು ಸೌಂದರ್ಯದ ಬಗ್ಗೆ ಯಾವುದೇ ಚಿಂತೆ ಇಲ್ಲದೇ ನೀವು ಹಬ್ಬವನ್ನು ಆನಂದಿಸಬಹುದು.