ಹಬ್ಬದ (Deepavali 2024) ಸಮಯದಲ್ಲಿ ಎಲ್ಲರೂ ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಹಾಗಾಗಿ ಬ್ಯೂಟಿ ಪಾರ್ಲರ್‌ಗೆ ಹೋಗಿ ದುಬಾರಿ ಹಣಕೊಟ್ಟು ವಿವಿಧ ಬಗೆಯ ಫೇಶಿಯಲ್, ಬ್ಲೀಚ್ ಮಾಡಿಸುತ್ತಾರೆ. ಇದರಿಂದ ಮುಖದ ಅಂದ ಹೆಚ್ಚಾಗಬಹುದು. ಆದರೆ ನಿಮ್ಮ ಚರ್ಮ ಹಾನಿಗೊಳಗುತ್ತದೆ. ಹಾಗಾಗಿ ಹಬ್ಬದ ಸಮಯದಲ್ಲಿ ನೀವು ನೈಸರ್ಗಿಕವಾಗಿ ಹೊಳೆಯುವ ಚರ್ಮವನ್ನು ಪಡೆಯಲು ನೈಸರ್ಗಿಕವಾಗಿ ದೊರೆಯುವಂತಹ ಪದಾರ್ಥಗಳನ್ನು ಬಳಸಿ ಫೇಸ್‍ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿ. ಅದಕ್ಕಾಗಿ ನೀವು ಈ ಪದಾರ್ಥಗಳನ್ನು ಬಳಸಬಹುದು.
ದೀಪಾವಳಿಗೆ ಹೊಳೆಯುವ ಚರ್ಮವನ್ನು ಪಡೆಯಲು ಸುಲಭ ಮತ್ತು ಪರಿಣಾಮಕಾರಿ ಫೇಸ್‍ಪ್ಯಾಕ್‍ಗಳು:
ಶ್ರೀಗಂಧದ ಫೇಸ್‍ಪ್ಯಾಕ್
ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಶ್ರೀಗಂಧವು ಜನಪ್ರಿಯ ಆಯುರ್ವೇದ ಪದಾರ್ಥವಾಗಿದ್ದು, ಇದು ಚರ್ಮವನ್ನು ತಂಪಾಗಿಸುವ ಗುಣಲಕ್ಷಣಗಳಿಂದ ತುಂಬಿದೆ. ಇದು ಚರ್ಮದ ಟೋನ್ ಅನ್ನು ಪ್ರಕಾಶಮಾನಗೊಳಿಸಲು, ಕಪ್ಪು ಕಲೆಗಳನ್ನು ಕಡಿಮೆ ಮಾಡಲು, ಸನ್‍ಟ್ಯಾನ್ ಅನ್ನು ನಿವಾರಿಸಲು ಚಿಕಿತ್ಸೆ ನೀಡಲು ಮತ್ತು ಮೊಡವೆಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಈ ಫೇಸ್‍ಪ್ಯಾಕ್ ತಯಾರಿಸಲು ಒಂದು ಚಮಚ ಶ್ರೀಗಂಧದ ಪುಡಿಯನ್ನು ತೆಗೆದುಕೊಂಡು ಅದನ್ನು ಚಿಟಿಕೆ ಅರಿಶಿನದೊಂದಿಗೆ ಬೆರೆಸಿ ದಪ್ಪ ಪೇಸ್ಟ್ ತಯಾರಿಸಿ ಅದಕ್ಕೆ ಎರಡು ಚಮಚ ಹಸಿ ಹಾಲು ಅಥವಾ ರೋಸ್ ವಾಟರ್ ಅನ್ನು ಸೇರಿಸಿ. ಇದನ್ನು ಮುಖವನ್ನು ಸ್ವಚ್ಛಗೊಳಿಸಿ ಬಳಿಕ ಹಚ್ಚಿ ಮತ್ತು 15 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಿರಿ.
ಬೇವಿನ ಫೇಸ್ ಪ್ಯಾಕ್
ಬೇವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದು ಚರ್ಮದ ರಂಧ್ರಗಳನ್ನು ಬಿಗಿಗೊಳಿಸಲು, ಮೊಡವೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಮತ್ತು ಕೆಂಪು ಅಥವಾ ಕಿರಿಕಿರಿಯ ಚರ್ಮ ಹೊಂದಿರುವವರಿಗೆ ಬೇವು ಪರಿಣಾಮಕಾರಿಯಾಗಿದೆ.
ಈ ಫೇಸ್‍ಪ್ಯಾಕ್ ತಯಾರಿಸಲು ಎರಡು ಚಮಚ ಬೇವಿನ ರಸವನ್ನು ಒಂದು ಚಮಚ ಕಡಲೆ ಹಿಟ್ಟು ಮತ್ತು ಕೆಲವು ಹನಿ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ. ಇದನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. 5 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ತೊಳೆಯಿರಿ.
ಅಲೋವೆರಾ ಫೇಸ್‍ಪ್ಯಾಕ್
ಅಲೋವೆರಾ ಜೆಲ್ ನೈಸರ್ಗಿಕ ಮಾಯಿಶ್ಚರೈಸಿಂಗ್ ಏಜೆಂಟ್ ಆಗಿದ್ದು, ಇದು ನಿಮ್ಮ ಚರ್ಮವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ. ನೀವು ಮೊಡವೆ ಕಲೆಗಳು, ಒಣ ಚರ್ಮ ಅಥವಾ ಸನ್‍ಟ್ಯಾನ್‍ನಿಂದ ಬಳಲುತ್ತಿದ್ದರೆ, ಅಲೋವೆರಾವನ್ನು ಹಚ್ಚುವುದರಿಂದ ನಿಮಗೆ ಉತ್ತಮ ಫಲಿತಾಂಶಗಳು ಸಿಗುತ್ತವೆ. ಇದು ಯಾವುದೇ ಅಡ್ಡಪರಿಣಾಮಗಳನ್ನು ಉಂಟುಮಾಡದೆ ಹೈಪರ್‌ಪಿಗ್ಮೆಂಟೇಶನ್ ಮತ್ತು ಕಪ್ಪು ಕಲೆಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ
ಒಂದು ಚಮಚ ಅಲೋವೆರಾ ಜೆಲ್ ಅನ್ನು ಒಂದು ಚಮಚ ಸೌತೆಕಾಯಿ ಪೇಸ್ಟ್‌ನೊಂದಿಗೆ ಮಿಕ್ಸ್ ಮಾಡಿ. ಕಿರಿಕಿರಿಗೊಂಡ ಚರ್ಮವನ್ನು ಶಮನಗೊಳಿಸಲು ಈ ಮಿಶ್ರಣವನ್ನು ನಿಮ್ಮ ಸ್ವಚ್ಛಗೊಳಿಸಿದ ಮುಖಕ್ಕೆ ಹಚ್ಚಿ.
ಇದನ್ನೂ ಓದಿ: ನಿತ್ಯ 2 ಕಿ.ಮೀ ಚುರುಕಾಗಿ ನಡೆದರೆ ಎಷ್ಟೆಲ್ಲಾ ಲಾಭವಿದೆ ನೋಡಿ!
ಆದರೆ ನೀವು ಯಾವುದೇ ಪದಾರ್ಥಗಳನ್ನು ನೇರವಾಗಿ ನಿಮ್ಮ ಚರ್ಮದ ಮೇಲೆ ಹಚ್ಚುವ ಮೊದಲು, ಅದು ಚರ್ಮಕ್ಕೆ ಹಾನಿಮಾಡುವುದಿಲ್ಲವೇ? ಎಂಬುದನ್ನು ತಿಳಿಯಲು ಪ್ಯಾಚ್ ಟೆಸ್ಟ್ ನಡೆಸಿ.