Friday, 22nd November 2024

Deepavali 2024: ಪ್ರೀತಿಪಾತ್ರರಿಗೆ ದೀಪಾವಳಿ ವಿಶೇಷವಾಗಿ ಏನು ಉಡುಗೊರೆ ಕೊಡಬಹುದು? ಇಲ್ಲಿದೆ ಟಿಪ್ಸ್

Deepavali 2024

ವರ್ಷವಿಡೀ ಹಲವಾರು ಹಬ್ಬಗಳು ಬಂದರೂ ದೀಪಾವಳಿ (Deepavali 2024) ಹಬ್ಬ ಮಾತ್ರ ಉಡುಗೊರೆಗಳಿಲ್ಲದೆ ಪೂರ್ಣವಾಗಲಾರದು. ಮನೆ ಮಂದಿ, ಸ್ನೇಹಿತರು, ಬಂಧು ಬಳಗದವರಿಗೆ ವರ್ಷದಲ್ಲಿ ಒಂದು ಬಾರಿ ಅದರಲ್ಲೂ ದೀಪಾವಳಿ ಸಂದರ್ಭದಲ್ಲಿ ಏನಾದರೂ ಉಡುಗೊರೆ (Deepavali Gift) ಕೊಡಬೇಕು ಎನ್ನುವ ಯೋಚನೆಯಂತೂ ಎಲ್ಲರೂ ಮಾಡಿರುತ್ತಾರೆ.

ದೀಪಾವಳಿ, ಬೆಳಕಿನ ಹಬ್ಬ. ನಮ್ಮೊಳಗೆ ಚೈತನ್ಯವನ್ನು ನೀಡುವ ಹಬ್ಬದ ವೇಳೆ ಹೃದಯಕ್ಕೆ ಹತ್ತಿರವಾಗಿರುವವರಿಗೆ ಉಡುಗೊರೆಯನ್ನು ನೀಡುವುದು ಒಂದು ಸಂಪ್ರದಾಯ. ಇದು ಸಕಾರಾತ್ಮಕ ಶಕ್ತಿಯನ್ನು ಹರಡುತ್ತದೆ, ಹಬ್ಬದ ಸಂತೋಷವನ್ನು ಒಟ್ಟಿಗೆ ಹಂಚಿಕೊಳ್ಳುವಂತೆ ಮಾಡುತ್ತದೆ.

ಇನ್ನೇನು ದೀಪಾವಳಿಗೆ ಬೆರಳೆಣಿಕೆಯ ದಿನಗಳಷ್ಟೇ ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ಉಡುಗೊರೆ ಕೊಡಲು ಏನು ಖರೀದಿ ಮಾಡುವುದು ಎನ್ನುವ ಚಿಂತೆಯಲ್ಲಿದ್ದೀರಾ ? ಸಿಹಿ ತಿಂಡಿ, ಒಣ ಹಣ್ಣುಗಳನ್ನು ಕೊಡುವುದು ಸಾಮಾನ್ಯ. ಏನಾದರೂ ವಿಶೇಷ ಕೊಡಬೇಕು ಎಂದೆನಿಸಿದರೆ ಈ ಉಡುಗೊರೆಗಳತ್ತ ಯೋಚಿಸಿ ನೋಡಿ. ಈ ಮೂಲಕ ನಿಮ್ಮ ಪ್ರೀತಿಪಾತ್ರರನ್ನು ಅಚ್ಚರಿಗೊಳಿಸಬಹುದು.

Deepavali 2024

ದೀಪ, ಮೇಣದ ಬತ್ತಿಗಳು

ದೀಪಾವಳಿ ಸಂದರ್ಭದಲ್ಲಿ ವಿಶಿಷ್ಟವಾದ ದೀಪ, ಮೇಣದ ಬತ್ತಿಗಳನ್ನು ಉಡುಗೊರೆಯಾಗಿ ನೀಡಬಹುದು. ಇದು ಖಂಡಿತ ಅತಿಥಿಗಳನ್ನು ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ. ಪರಿಮಳಯುಕ್ತ ಮೇಣದಬತ್ತಿಗಳು ಅಥವಾ ಕೈಯಿಂದ ಚಿತ್ರಿಸಿದ ಅಲಂಕಾರಿಕ ದೀಪಗಳು ಹಬ್ಬದ ಅಲಂಕಾರದಲ್ಲಿ ಖಂಡಿತ ಬಳಕೆಯಾಗುತ್ತದೆ.

Deepavali 2024

ಒಳಾಂಗಣ ಸಸ್ಯಗಳು

ದೀಪಾವಳಿಯ ಸಮಯದಲ್ಲಿ ಸಾಂಪ್ರದಾಯಿಕ ಉಡುಗೊರೆ ಆಯ್ಕೆ ಮಾಡುವುದಾದರೆ ಒಳಾಂಗಣ ಸಸ್ಯಗಳನ್ನು ಆಯ್ದುಕೊಳ್ಳಬಹುದು. ಇದು ಮನೆಯ ಸೌಂದರ್ಯಕ್ಕೆ ಹಸಿರಿನ ಸ್ಪರ್ಶವನ್ನು ನೀಡುತ್ತದೆ. ಸಸ್ಯಗಳಿದ್ದಲ್ಲಿ ಸಂತೋಷ ಖಂಡಿತ ಬರುತ್ತದೆ.

Deepavali 2024

ಕರಕುಶಲ ವಸ್ತುಗಳು

ನಮ್ಮ ಸಂಪ್ರದಾಯ, ಪರಂಪರೆಯನ್ನು ರಕ್ಷಿಸಲು, ಗೌರವಿಸಲು ಪ್ರೀತಿಪಾತ್ರರಿಗೆ ಕರಕುಶಲ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು. ಕೈಮಗ್ಗದ ಸೀರೆಗಳು, ಮರದ ಕರಕುಶಲ ವಸ್ತುಗಳು, ಗೋಡೆಯ ಮೇಲೆ ತೂಗು ಹಾಕುವ ಅಲಂಕಾರಿಕ ವಸ್ತುಗಳು, ಹಿತ್ತಾಳೆಯ ಅಲಂಕಾರಿಕ ಸಾಧನಗಳು, ಪರಿಮಳಯುಕ್ತ ಸಾಬೂನು, ಅತ್ತರ್‌ಗಳಂತಹ ಸಾಂಪ್ರದಾಯಿಕ ವಸ್ತುಗ ಉಡುಗೊರೆಗಳಲ್ಲಿ ಸಂಸ್ಕೃತಿ ಮತ್ತು ಕಲಾತ್ಮಕತೆಯ ತುಣುಕು ಇದ್ದರೆ ಹಬ್ಬವನ್ನು ಅರ್ಥಪೂರ್ಣ ಮತ್ತು ವಿಶೇಷವಾಗಿಸುತ್ತದೆ.

Deepavali 2024

ದೇವರ ವಿಗ್ರಹ

ದೀಪಾವಳಿ ಸಂದರ್ಭದಲ್ಲಿ ವಿಶೇಷವಾಗಿ ಗಣೇಶ ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಈ ವಿಗ್ರಹಗಳನ್ನು ಉಡುಗೊರೆಯಾಗಿ ನೀಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮನೆಗೆ ಸಮೃದ್ಧಿ ಮತ್ತು ಅದೃಷ್ಟವನ್ನು ತರುವ ಈ ವಿಗ್ರಹಗಳನ್ನು ಉಡುಗೊರೆಯಾಗಿ ನೀಡಬಹುದು.

Deepavali 2024: ಹಬ್ಬದ ಸಂಭ್ರಮ ಹೆಚ್ಚಿಸಿ; ಸುಲಭವಾಗಿ ಈ ರೀತಿ ರಂಗೋಲಿ ಬಿಡಿಸಿ!

Deepavali 2024

ಚಿನ್ನ ಅಥವಾ ಬೆಳ್ಳಿಯ ನಾಣ್ಯ

ಬಜೆಟ್‌ಗೆ ಅನುಗುಣವಾಗಿ ಚಿನ್ನ ಅಥವಾ ಬೆಳ್ಳಿ ನಾಣ್ಯವನ್ನು ಉಡುಗೊರೆಯಾಗಿ ನೀಡಬಹುದು. ಇದರಲ್ಲಿ ಲಕ್ಷ್ಮಿ ದೇವಿ ಮತ್ತು ಗಣೇಶನ ಕೆತ್ತನೆಯೂ ಇರುತ್ತದೆ. ಸಮೃದ್ಧಿ ಮತ್ತು ಅದೃಷ್ಟದ ಸಂಕೇತ ಇದಾಗಿದೆ.