Saturday, 26th October 2024

Deepavali Vastu Tips: ದೀಪಾವಳಿ ಪೂಜೆ ಸಂದರ್ಭದಲ್ಲಿ ಈ ವಾಸ್ತು ನಿಯಮ ಪಾಲಿಸಿ

Vastu Tips

ಬೆಳಕಿನ ಹಬ್ಬ ದೀಪಾವಳಿಗಾಗಿ (deepavali) ಎಲ್ಲರೂ ಕಾತರರಾಗಿರುತ್ತಾರೆ. ಸಂತೋಷದೊಂದಿಗೆ (happiness) ಸಮೃದ್ಧಿಯನ್ನು (Prosperity) ತರುವ ಹಬ್ಬವೆಂದೇ ಪರಿಗಣಿಸಿರುವ ದೀಪಾವಳಿಯಲ್ಲಿ ವಾಸ್ತು ನಿಯಮಗಳ (Deepavali Vastu Tips) ಪಾಲನೆ ಕೂಡ ಬಹು ಮುಖ್ಯವಾಗಿದೆ.

ಕೆಲವೊಂದು ವಾಸ್ತು ನಿಯಮಗಳನ್ನು ಹಬ್ಬಗಳಲ್ಲಿ ಅಳವಡಿಸಿಕೊಳ್ಳುವುದು ಮನೆಯಲ್ಲಿ ಸಾಮರಸ್ಯ ವೃದ್ಧಿಗೆ ಸಕಾರಾತ್ಮಕ ವಾತಾವರಣಕ್ಕೆ ವಿಶೇಷ ಕೊಡುಗೆಯನ್ನು ನೀಡುತ್ತದೆ. ಇದು ಹಬ್ಬಗಳ ಆಚರಣೆಗೂ ಸರಿಯಾದ ಅರ್ಥವನ್ನು ನೀಡುತ್ತದೆ.

ಅಕ್ಟೋಬರ್ ತಿಂಗಳಾಂತ್ಯದಲ್ಲಿ ಬರಲಿರುವ ದೀಪಾವಳಿ ಹಬ್ಬದ ತಯಾರಿ ಈಗ ಮನೆಮನೆಯಲ್ಲೂ ಆರಂಭವಾಗಿದೆ. ಎಲ್ಲರೂ ಬಹಳಷ್ಟು ಶ್ರದ್ದೆಯಿಂದ ಆಚರಣೆಗೆ ಸಜ್ಜಾಗುತ್ತಿದ್ದಾರೆ.

ಮನೆಯ ಅಲಂಕಾರ, ದೀಪಗಳ ಖರೀದಿ, ಹೊಸ ಉಡುಗೆ ತೊಡುಗೆಗಳ ಜೊತೆಜೊತೆಗೆ ವಿವಿಧ ಖಾದ್ಯಗಳ ಮೆನು ಕೂಡ ತಯಾರಾಗುತ್ತಿರುವಾಗ ವಾಸ್ತು ಶಾಸ್ತ್ರದ ಬಗ್ಗೆಯೂ ಕೊಂಚ ಯೋಚಿಸಿದರೆ ಹಬ್ಬದ ಕಳೆ ಮತ್ತಷ್ಟು ಹೆಚ್ಚುವುದು. ದೀಪಾವಳಿ ಹಬ್ಬದ ವೇಳೆ ಮನೆಗೆ ಸಂತೋಷ, ಸಮೃದ್ಧಿಯನ್ನು ಸ್ವಾಗತಿಸಲು ಈ ಆರು ಅಂಶಗಳನ್ನು ಪಾಲಿಸಿ.

Vastu Tips

ಸ್ವಚ್ಛತೆ

ಹಬ್ಬದ ವೇಳೆ ಸ್ವಚ್ಛತೆಯ ಪಾಲನೆ ಬಹುಮುಖ್ಯವಾಗಿದೆ. ವಾಸ್ತು ಶಾಸ್ತ್ರವು ಕೂಡ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಯಾಕೆಂದರೆ ಮನೆ ಸ್ವಚ್ಛವಾಗಿದ್ದರೆ ನಕಾರಾತ್ಮಕ ಶಕ್ತಿ ಮನೆಗೆ ಪ್ರವೇಶಿಸುವುದಿಲ್ಲ. ದೀಪಾವಳಿಯ ಮೊದಲು ಮನೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಇದು ಮನೆಯಲ್ಲಿ ಧನಾತ್ಮಕ ಶಕ್ತಿ ಮುಕ್ತವಾಗಿ ಹರಿಯುವಂತೆ ಮಾಡುತ್ತದೆ.

ಪ್ರವೇಶ ದ್ವಾರದ ಅಲಂಕಾರ

ಮನೆಗೆ ಧನಾತ್ಮಕ ಶಕ್ತಿ ಪ್ರವೇಶಿಸುವಂತೆ ಮಾಡಲು ಪ್ರವೇಶ ದ್ವಾರವನ್ನು ಸುಂದರವಾಗಿ ಅಲಂಕರಿಸಿ. ತೋರಣ, ಮಂಗಳಕರವಾದ ಚಿಹ್ನೆ, ಸುಂದರ ರಂಗೋಲಿಗಳಿಂದ ಮುಖ್ಯ ಬಾಗಿಲನ್ನು ಅಲಂಕರಿಸಿ. ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಸಂಕೇತಿಸುವ ದೀಪಗಳನ್ನು ಎರಡೂ ಬದಿಯಲ್ಲಿ ಇರಿಸಿ. ಇದು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.

Vastu Tips

ತಾಜಾ ಹೂವುಗಳು

ಮನೆಯ ಅಲಂಕಾರಕ್ಕೆ ತಾಜಾ ಹೂವುಗಳನ್ನು ಆಯ್ದುಕೊಳ್ಳಿ. ಇದು ಮನೆಯಲ್ಲಿ ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಮನೆಯ ಉತ್ತರ ಮತ್ತು ಪೂರ್ವದ ಗೋಡೆಗಳಲ್ಲಿ ಹೂವಿನ ಜೋಡಣೆ ಮಾಡುವುದು ಮನೆಯಲ್ಲಿ ಮಂಗಳಕರ ಶಕ್ತಿಗಳ ಹರಿವನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಸಂತೋಷ ಮತ್ತು ನೆಮ್ಮದಿಯ ಭಾವವನ್ನು ಹೂವುಗಳು ಸೃಷ್ಟಿಸುತ್ತದೆ.

ದೇವರ ವಿಗ್ರಹ

ದೀಪಾವಳಿ ಸಂದರ್ಭದಲ್ಲಿ ಪೂಜಾ ಗೃಹದಲ್ಲಿ ಲಕ್ಷ್ಮಿ ಮತ್ತು ಗಣಪತಿಯ ವಿಗ್ರಹಗಳನ್ನು ಇರಿಸಿ. ಇದು ಮನೆಗೆ ದೈವಿಕ ಆಶೀರ್ವಾದ ಮತ್ತು ಸಮೃದ್ಧಿಯನ್ನು ಆಹ್ವಾನಿಸುತ್ತದೆ. ವಿಗ್ರಹಗಳನ್ನು ಸ್ವಚ್ಛ ಮತ್ತು ಎತ್ತರದಲ್ಲಿ ಇರಿಸುವುದು ಒಳ್ಳೆಯದು. ವಾಸ್ತು ಮಾರ್ಗಸೂಚಿಗಳ ಪ್ರಕಾರ ದೇವರ ವಿಗ್ರಹಗಳನ್ನು ಮಲಗುವ ಕೋಣೆ ಅಥವಾ ಸ್ನಾನಗೃಹಗಳ ಬಳಿ ಇಡಬಾರದು.

ಹಾನಿಗೊಳಗಾದ ವಸ್ತುಗಳನ್ನು ಇಡಬೇಡಿ

ಹಬ್ಬದ ಸಿದ್ಧತೆಗಳ ನಡುವೆ ಪೂಜೆಯಲ್ಲಿ ಬಳಸುವ ವಸ್ತುಗಳ ಗುಣಮಟ್ಟ ಮತ್ತು ಸ್ಥಿತಿಗೆ ಗಮನ ಕೊಡುವುದು ಅತ್ಯಗತ್ಯ. ಮುರಿದ ಅಥವಾ ಹಾನಿಗೊಳಗಾದ ವಿಗ್ರಹಗಳನ್ನು ವಾಸ್ತು ಶಾಸ್ತ್ರದಲ್ಲಿ ಅಶುಭವೆಂದು ಪರಿಗಣಿಸಲಾಗಿದೆ. ಇದು ಮನೆಯ ಶಕ್ತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಪೂಜಾ ತಟ್ಟೆ, ದೀಪಗಳು ಸೇರಿದಂತೆ ಇತರ ವಸ್ತುಗಳು ಸಾಮರಸ್ಯ ಮತ್ತು ಸಂಪೂರ್ಣತೆಯನ್ನು ಸಂಕೇತಿಸುವ ಉತ್ತಮ ಸ್ಥಿತಿಯಲ್ಲಿವೆ ಎಂದು ಖಚಿತಪಡಿಸಿಕೊಳ್ಳಿ.

Vastu Tips

Vastu Tips: ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬುವ ಹಳದಿ ಬಣ್ಣ ಯಾವ ದಿಕ್ಕಿನಲ್ಲಿದ್ದರೆ ಒಳ್ಳೆಯದು?

ದೀಪಗಳಿಗೆ ಸರಿಯಾದ ಬಣ್ಣ

ದೀಪಾವಳಿ ದೀಪಗಳಿಗೆ ಬಣ್ಣಗಳ ಆಯ್ಕೆಯು ಮನೆಯ ಶಕ್ತಿಯ ಮೇಲೂ ಪರಿಣಾಮ ಬೀರುತ್ತದೆ. ಹಳದಿ, ಕಿತ್ತಳೆ ಮತ್ತು ಕೆಂಪು ಬಣ್ಣಗಳಂತಹ ಬೆಚ್ಚಗಿನ ಮತ್ತು ರೋಮಾಂಚಕ ವರ್ಣಗಳನ್ನು ಆರಿಸಿಕೊಳ್ಳಿ. ಅವು ಸಕಾರಾತ್ಮಕತೆ ಮತ್ತು ಚೈತನ್ಯವನ್ನು ವೃದ್ಧಿಸುತ್ತದೆ. ವಾಸ್ತು ತತ್ತ್ವಗಳೊಂದಿಗೆ ಪ್ರತಿಧ್ವನಿಸುವ ಹಬ್ಬದ ವಾತಾವರಣವನ್ನು ರಚಿಸಲು ಮನೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ.