Friday, 22nd November 2024

ಕ್ಷಮೆ ಯಾಚಿಸಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್

ನವದೆಹಲಿ: ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ವಿರುದ್ಧದ ಮಾನನಷ್ಟ ಮೊಕದ್ದಮೆ ದೆಹಲಿ ಕೋರ್ಟ್’ನಲ್ಲಿ ಇತ್ಯರ್ಥ ಗೊಂಡಿದೆ.

ದಿ ಕ್ಯಾರವಾನ್ ನಲ್ಲಿ ಪ್ರಕಟಗೊಂಡಿದ್ದ ಆರ್ಟಿಕಲ್ ದಿ ಡಿ ಕಂಪನೀಸ್ (ವಿವೇಕ್ ದೋವಲ್& ಜೈರಾಮ್ ರಮೇಶ್ ಹಾಗೂ ಇತರರ ಬಗ್ಗೆ) ಕುರಿತಾಗಿ ನಡೆಸಿದ ಸುದ್ದಿಗೋಷ್ಠಿಗೆ ಸಂಬಂಧಿಸಿದಂತೆ ವಿವೇಕ್ ದೋವಲ್ ಜೈರಾಮ್ ರಮೇಶ್ ವಿರುದ್ಧ ಮಾನ ನಷ್ಟ ಮೊಕದ್ದಮೆ ಹೂಡಿದ್ದರು.

ನ್ಯಾಯಾಧೀಶ ಸಚಿನ್ ಗುಪ್ತ, ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎದುರು ಹಾಜರಾದ ಜೈ ರಾಮ್ ರಮೇಶ್, ಆ ಕ್ಷಣದಲ್ಲಿ ವಿವೇಕ್ ದೋವಲ್ ಅವರ ವಿರುದ್ಧ ಅನೇಕ ಆರೋಪಗಳನ್ನು ಮಾಡಿದ್ದೆ, ಆದರೆ ಪರಿಶೀಲಿಸಬೇಕಿತ್ತು, ಕ್ಷಮೆ ಕೇಳು ತ್ತಿದ್ದೇನೆ” ಎಂದು ಹೇಳಿದ್ದಾರೆ. ದೋವಲ್ ಕ್ಷಮೆಯನ್ನು ಅಂಗೀಕರಿಸಿದ್ದು, ಮಾನನಷ್ಟ ಮೊಕದ್ದಮೆಯನ್ನು ಕೋರ್ಟ್ ಇತ್ಯರ್ಥ ಗೊಳಿಸಿದೆ.

ದಿ ಕ್ಯಾರವಾ, ಪತ್ರಕರ್ತರಾದ ಕೌಶಲ್ ಶ್ರಾಫ್ ಅವರ ವಿರುದ್ಧವೂ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು. 2019 ರಲ್ಲಿ ರಮೇಶ್ ಅವರಿಗೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನನ್ನೂ ಮಂಜೂರು ಮಾಡಲಾಗಿತ್ತು.