Friday, 13th December 2024

ನವದೆಹಲಿಯಲ್ಲಿ ಕೊಂಕಣಿ ಅಕಾಡೆಮಿ ಸ್ಥಾಪನೆಗೆ ಸಂಪುಟ ಅಸ್ತು

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೊಂಕಣಿ ಅಕಾಡೆಮಿ ಸ್ಥಾಪಿಸಲು ಶುಕ್ರವಾರ ಮುಖ್ಯಮಂತ್ರಿ ಅರವಿಂದ್‍ ಕೇಜ್ರಿವಾಲ್‍ ನೇತೃತ್ವದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಕೊಂಕಣಿ ಭಾಷೆಯ ಬೆಳವಣಿಗೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಕೇಜ್ರಿವಾಲ್‍ ಅವರು, ರಾಜ್ಯದಲ್ಲಿ ವಾಸವಿರುವ ಎಲ್ಲಾ ಕೊಂಕಣಿ ಭಾಷಿಗರನ್ನು ಟ್ವೀಟ್‍ ಮೂಲಕ ಅಭಿನಂದನೆ ಸಲ್ಲಿಸಿದರು.

ಕೊಂಕಣಿ ಭಾಷೆಯು ಗೋವಾ ರಾಜ್ಯದಲ್ಲಿ ಅಧಿಕೃತವಾಗಿ ಬಳಕೆಯಲ್ಲಿದೆ. ಕೊಂಕಣ್ ಮೂಲದ ಅಲ್ಲಿನ ನಿವಾಸಿಗಳು ಕೊಂಕಣಿ ಭಾಷೆಗೆ ಪ್ರಥಮ ಆದ್ಯತೆ ನೀಡುತ್ತಾರೆ. ಕಳೆದ ಭಾನುವಾರ, ದೆಹಲಿ ಸರ್ಕಾರವು ಕಲೆ, ಸಂಸ್ಕೃತಿ ಹಾಗೂ ಭಾಷಾ ಇಲಾಖೆ ಅಸ್ತಿತ್ವಕ್ಕೆ ತಂದಿದೆ. ರಾಜಧಾನಿಯಲ್ಲಿ ತಮಿಳು ಭಾಷೆಯನ್ನು ಪ್ರೋತ್ಸಾಹಿಸುವ ಸಲುವಾಗಿ ತಮಿಳು ಅಕಾಡೆಮಿ ಸ್ಥಾಪಿಸುವ ಸುಳಿವು ನೀಡಿದೆ.