ಹೊಸದಿಲ್ಲಿ: ದಿಲ್ಲಿಯ ಅನೇಕಾಂತ್ ಅಪಾರ್ಟ್ಮೆಂಟ್ನ ವಸುಂಧರಾ ಎನ್ಕ್ಲೇವ್ನಲ್ಲಿ ಇಬ್ಬರು ಸಹೋದರಿಯರು ಉತ್ತರ ಪ್ರದೇಶದ ಮಾಜಿ ಡಿಎಸ್ಪಿ (Ex-DSP) ಮೇಲೆ ಹಲ್ಲೆ ನಡೆಸಿರುವ ಘಟನೆ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಶುಕ್ರವಾರ (ನ. 1) ರಾತ್ರಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ವಾಹನದ ಹಾರ್ನ್ ಮಾಡುವುದಕ್ಕೆ ಸಂಬಂಧಿಸಿದಂತೆ ಸಹೋದರಿಯರು ಹಲ್ಲೆ ನಡೆಸಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ಅಶೋಕ್ ಶರ್ಮಾ ಮೇಲೆ ಸಹೋದರಿಯರು ಮಣ್ಣಿನ ದೀಪಗಳು ಮತ್ತು ಹೂವಿನ ಕುಂಡಗಳಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎನ್ನಲಾಗಿದೆ. ಕ್ಯಾನ್ಸರ್ ರೋಗಿಯೂ ಆಗಿರುವ ಶರ್ಮಾ ಅವರನ್ನು ಕೂಡಲೇ ಎಲ್ಬಿಎಸ್ ಆಸ್ಪತ್ರೆಗೆ ದಾಖಲಿಸಿ, ರಾತ್ರಿಯ ನಂತರ ಡಿಸ್ಚಾರ್ಜ್ ಮಾಡಲಾಗಿದೆ (Viral News).
ಘಟನೆ ನಡೆದ ಮರುದಿನ ಮತ್ತೆ ಅಶೋಕ್ ಶರ್ಮ ಅವರ ಪತ್ನಿ ಶಾಂತಿ ಶರ್ಮಾ ಮತ್ತು ಪುತ್ರಿಯರಾದ ರೀನಾ ಮತ್ತು ಪ್ರತಿಭಾ ಸೇರಿದಂತೆ ಶರ್ಮಾ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದಾರೆ. ಮೂವರು ಮಹಿಳೆಯರಿಗೆ ಕಚ್ಚಿ ಗಾಯಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ಅರೋಪಿಗಳನ್ನು ಭವ್ಯಾ ಜೈನ್ ಮತ್ತು ಛವಿ ಜೈನ್ ಎಂದು ಗುರುತಿಸಲಾಗಿದೆ.
.@DCPEastDelhi के वसुंधरा एन्क्लेव स्थित अनिकांत अपार्टमेंट में पहले बुजुर्ग और फिर उनकी फैमिली से मारपीट कर पब्लिक और पुलिस को हलकान करने वाली दो बहनें इस तरह से से भागी। पुलिस ने इन पर हत्या का प्रयास समेत चार केस दर्ज किए हैं। दोनों देर रात पकड़ी गईं। @NBTDilli pic.twitter.com/5PTAOMzidt
— Shanker Singh/ शंकर सिंह, LLB (@shankersingh5) November 3, 2024
ಘಟನೆಯ ನಂತರ ಸಹೋದರಿಯರು ಫ್ಲಾಟ್ನ ಬಾಗಿಲು ಹಾಕಿಕೊಂಡು ಹೊರ ಬರದೆ ಅಲ್ಲೇ ಇದ್ದರು. ಸ್ಥಳಕ್ಕೆ ಅಶೋಕ ನಗರ ಪೊಲೀಸರು ಭೇಟಿ ನೀಡಿ ಬಾಗಿಲು ತೆರೆಯುವಂತೆ ಹೇಳಿದ್ದಾರೆ. ಅದರೂ ಬಾಗಿಲು ತೆರೆದು ಹೊರ ಬರದ ಮಹಿಳೆಯರು ಅಲ್ಲಿಯೇ ಕೂಗಾಟ ನಡೆಸಿದ್ದರು. ಹೀಗಾಗಿ ಮನೆಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಯಿತು. ನಂತರ ಹೊರ ಬಂದ ಸಹೋದರಿಯರು ಸಿಕ್ಕ ಸಿಕ್ಕವರ ಮೇಲೆ ಹಲ್ಲೆಗೆ ಮುಂದಾಗಿದ್ದರು ಎಂದು ಅಕ್ಕ ಪಕ್ಕದ ನಿವಾಸಿಗಳು ಹೇಳಿದ್ದಾರೆ.
ಇದನ್ನೂ ಓದಿ : Road Accident: ಭೀಕರ ರಸ್ತೆ ಅಪಘಾತ; ಬಸ್ ಮೋರಿಗೆ ಡಿಕ್ಕಿ ಹೊಡೆದು 12 ಮಂದಿ ಸಾವು
ಪರಾರಿಯಾಗಲು ಯತ್ನಿಸಿ ಪೊಲೀಸ್ ಬಲೆಗೆ ಬಿದ್ದರು
ಮನೆಯಿಂದ ಹೊರಬಂದ ಆರೋಪಿಗಳು ತಮ್ಮ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾರೆ. ಅವರನ್ನು ಬಂಧಿಸಲು ಮುಂದಾದ ಪೊಲೀಸರ ಮೇಲೆ ಹಲ್ಲೆ ನಡೆಸಿ, ಕಾರು ತೆಗೆದುಕೊಂಡು ಹೋಗಿದ್ದಾರೆ. ಕಾರು ಓಡಿಸುವ ಭರದಲ್ಲಿ ಸೊಸೈಟಿಯ ಗೇಟ್ ಸೇರಿದಂತೆ ನಿಲುಗಡೆ ಮಾಡಲಾಗಿದ್ದ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ತಿಳಿದು ಬಂದಿದೆ. ನೋಯ್ಡಾ ಮಾರ್ಗದಲ್ಲಿ ಹೋಗುವಾಗ ಸ್ಕೂಟರ್ಗೆ ಡಿಕ್ಕಿ ಹೊಡೆಸಿ ಅದನ್ನು ಸುಮಾರು 1.5 ಕಿ.ಮೀ. ಎಳೆದೊಯ್ದಿದ್ದಾರೆ ಎಂದು ತಿಳಿದಿದೆ. ನಂತರ ನೋಯ್ಡಾದಲ್ಲಿ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಪೊಲೀಸರ ಬಲೆಗೆ ಬಿದಿದ್ದಾರೆ. ಅವರನ್ನು ಬಂಧಿಸಿ ವಿಚಾರಣೆ ನಡೆಯುತ್ತಿದೆ. ಸದ್ಯ ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ. ಸಹೋದರಿಯರ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ.