Friday, 22nd November 2024

Delhi Shooting: ನೈಟ್‌ ಕ್ಲಬ್‌ನಲ್ಲಿ ಗುಂಡಿನ ಸಪ್ಪಳ; ಬೌನ್ಸರ್‌ಗಳನ್ನು ಗನ್‌ ಪಾಯಿಂಟ್‌ನಲ್ಲಿಟ್ಟು ಬೆದರಿಕೆ; ವಿಡಿಯೋ ಇದೆ

Delhi shooting

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ರಾತ್ರೋರಾತ್ರಿ ಗುಂಡಿನ ಸದ್ದು(Delhi Shooting) ಕೇಳಿಬಂದಿದೆ. ಸೀಮಾಪುರಿ ನೈಟ್‌ಕ್ಲಬ್‌(Night club)ನ ಹೊರಗೆ ನಡೆದ ಗುಂಡಿನ ದಾಳಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ 30 ವರ್ಷದ ವ್ಯಕ್ತಿಯನ್ನು ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಘಟನೆಯ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ.

ಶುಕ್ರವಾರ ರಾತ್ರಿ ಸೀಮಾಪುರಿಯ ಜಿಲ್ಮಿಲ್ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಕಾಂಚ್ ಕ್ಲಬ್‌ನಲ್ಲಿ ಈ ಘಟನೆ ನಡೆದಿದೆ. ಬಂದೂಕು, ಪಿಸ್ತೂಲ್‌ಗಳ ಜತೆ ಕ್ಲಬ್‌ಗೆ ಬಂದ ನಾಲ್ವರು ಅಲ್ಲಿನ ಬೌನ್ಸರ್‌ಗಳ ಜತೆ ಕಿರಿಕ್‌ ಮಾಡಿಕೊಂಡಿದ್ದಾರೆ. ಕೊನೆಗೆ ಬಂದೂಕು ತೋರಿಸಿ ಅವರನ್ನು ಬೆದರಿಸಿದ್ದಾರೆ. ಅಲ್ಲದೇ ಮಹಿಳಾ ಬೌನ್ಸರ್‌ ಸೇರಿದಂತೆ ಕ್ಲಬ್‌ನ ಬೌನ್ಸರ್‌ಗಳನ್ನು ತಮ್ಮ ಎದುರು ಮಂಡಿಯೂರುವಂತೆ ಬೆದರಿಕೆ ಹಾಕಿದ್ದಾರೆ. ಬಳಿಕ ಗಾಳಿಯಲ್ಲಿ ಒಂದೇ ಸಮನೇ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳದಿಂದ ಪರಾರಿಯಾಗುವ ಮೊದಲು ಶೂಟರ್‌ಗಳು ಹತ್ತಕ್ಕೂ ಹೆಚ್ಚು ಗುಂಡುಗಳನ್ನು ಹಾರಿಸಿದ್ದಾರೆ. ದಾಳಿಕೋರರು ಮಹಿಳಾ ಬೌನ್ಸರ್‌ನನ್ನೂ ಗನ್‌ಪಾಯಿಂಟ್‌ನಲ್ಲಿ ಹಿಡಿದು, ಆಕೆಯ ತಲೆಗೆ ಪಿಸ್ತೂಲ್ ಇಟ್ಟು ಮತ್ತಷ್ಟು ಭಯ ಹುಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇನ್ನು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ. ಮೇಲ್ನೋಟಕ್ಕೆ ಇದೊಂದು ಹಣ ಸುಲಿಗೆ ಗ್ಯಾಂಗ್‌ನಂತೆ ಕಂಡುಬಂದಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರೂಖ್‌ ಎಂಬವನನ್ನು ಅರೆಸ್ಟ್‌ ಮಾಡಲಾಗಿದೆ

ಅಮೆರಿಕದಲ್ಲೂ ಇಂತಹದ್ದೇ ಒಂದು ಘಟನೆ ನಡೆದಿದ್ದು, ಅಂತರರಾಜ್ಯ ಹೆದ್ದಾರಿಯಲ್ಲಿ ದುಷ್ಕರ್ಮಿಯೋರ್ವ ಏಕಾಏಕಿ ಗುಂಡಿನ ದಾಳಿ(America shootout) ನಡೆಸಿದ್ದು, ಏಳು ಮಂದಿ ಗಂಭೀರವಾಗಿ ಗಾಯಾಗೊಂಡಿದ್ದಾರೆ. ಅಮೆರಿಕದ ಕೆಂಟಕಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇನ್ನು ದುಷ್ಕರ್ಮಿ ಸ್ಥಳದಿಂದ ಎಸ್ಕೇಪ್‌ ಆಗಿದ್ದು, ಆತನಿಗಾಗಿ ಪೊಲೀಸರು ಭಾರೀ ಹುಡುಕಾಟ ನಡೆಸಿದ್ದಾರೆ.

ನಿನ್ನೆ ಸಂಜೆ 6 ಗಂಟೆಗೆ ಈ ಘಟನೆ ನಡೆದಿದ್ದು, ಲಾರೆನ್‌ ಕೌಂಟಿ ಪಟ್ಟಣದ ಹೊರಗೆ ಸುಮಾರು ಒಂಬತ್ತು ಮೈಲುಗಳಷ್ಟು ದೂರದಲ್ಲಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ದುಷ್ಕರ್ಮಿ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಪರಿಣಾಮವಾಗಿ ವಾಹನಗಳು ಸೇತುವೆಗೆ ಡಿಕ್ಕಿ ಹೊಡೆದಿವೆ. ಇನ್ನು ಕೆಲವು ವಾಹನಗಳು ಸಮೀಪದ ಅರಣ್ಯ ಪ್ರದೇಶಕ್ಕೆ ನುಗ್ಗಿವೆ. ಇನ್ನು ದುಷ್ಕರ್ಮಿ ಡೇನಿಯಲ್ ಬೂನ್ ರಾಷ್ಟ್ರೀಯ ಅರಣ್ಯದಲ್ಲಿ ಅಡಗಿ ಕುಳಿತಿರುವ ಬಗ್ಗೆ ವರದಿಯಾಗಿದ್ದು, ಪೊಲೀಸರು ಭಾರೀ ಹುಡುಕಾಟ ನಡೆಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: America shootout: ರಾಷ್ಟ್ರೀಯ ಹೆದ್ದಾರಿಯಲ್ಲಿ ಶೂಟೌಟ್‌; ಏಳು ವಾಹನ ಚಾಲಕರಿಗೆ ಗಂಭೀರ ಗಾಯ- ದುಷ್ಕರ್ಮಿ ಎಸ್ಕೇಪ್‌