Thursday, 19th September 2024

Delhi Shootout: ರಾತ್ರೋರಾತ್ರಿ ಶೂಟೌಟ್‌; ಆಫ್ಘನ್‌ ಮೂಲದ ಜಿಮ್‌ ಓನರ್‌ ಬಲಿ- ಬಿಷ್ಣೋಯ್‌ ಗ್ಯಾಂಗ್‌ನಿಂದ ಕೃತ್ಯ

Delhi Shootout

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ(Delhi Shootout)ಯಲ್ಲಿ ರಾತ್ರೋರಾತ್ರಿ ಗುಂಡಿನ ಸಪ್ಪಳ ಕೇಳಿಸಿದ್ದು, ಜಿಮ್‌ ಮಾಲೀಕನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ವರದಿಯಾಗಿದೆ. ಗುರುವಾರ ರಾತ್ರಿ ದೆಹಲಿಯ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ 35 ವರ್ಷದ ಜಿಮ್ ಮಾಲೀಕ(Gym Owner)ನನ್ನು ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ(Shot dead) ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಭೀಕರ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಅಫ್ಘಾನಿಸ್ತಾನ ಮೂಲದ ಮತ್ತು ಸಿಆರ್ ಪಾರ್ಕ್‌ನಲ್ಲಿ ನೆಲೆಸಿದ್ದ ನಾದಿರ್ ಶಾ ಎಂಬಾತ ಮೃತ ದುರ್ದೈವಿಯಾಗಿದ್ದು, ದುಷ್ಕರ್ಮಿಗಳ ಗುಂಡಿನ ದಾಳಿಯಲ್ಲಿ ಆತ ಗಂಭೀರವಾಗಿ ಗಾಯಗೊಂಡು ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ. ರಾತ್ರಿ 10:45 ರ ಸುಮಾರಿಗೆ ಗುಂಡಿನ ದಾಳಿಯ ಬಗ್ಗೆ ಪೊಲೀಸರಿಗೆ ಕರೆ ಬಂದಿತು. ತಕ್ಷಣ ಸ್ಥಳಕ್ಕೆ ದೌಡಾಯಿಸಿ ನೋಡಿದಾಗ ರಕ್ತದಮಡುವಿನಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಶಾನನ್ನು ಪೊಲೀಸರು ಕಂಡಿದ್ದಾರೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿಗೆ ತಲುಪುವಷ್ಟರಲ್ಲಿ ಆತ ಕೊನೆಯುಸಿರೆಳೆದಿದ್ದ ಎನ್ನಲಾಗಿದೆ.

ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಗಾಳಿಯಲ್ಲಿ ಹಲವಾರು ಸುತ್ತಿನ ಗುಂಡು ಹಾರಿಸಿದ್ದು, ಸ್ಥಳದಲ್ಲಿ ಖಾಲಿಯಾದ ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಲ್ಲಾ ಸಂಭಾವ್ಯ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಅಂಕಿತ್ ಚೌಹಾಣ್ ಹೇಳಿದ್ದಾರೆ.

“ರಾತ್ರಿ 10:45 ರ ಸುಮಾರಿಗೆ, ಗುಂಡಿನ ದಾಳಿಯ ಘಟನೆಯ ಬಗ್ಗೆ ನಮಗೆ ಪಿಸಿಆರ್ ಕರೆ ಬಂದಿದೆ. ನಾದಿರ್‌ ನಾದಿರ್‌ ಶಾ ಮೂಲತಃ ಅಪ್ಘಾನಿಸ್ತಾನದವನಾಗಿದ್ದು, ಗ್ರೇಟರ್‌ ಕೈಲಾಶ್‌ನಲ್ಲಿ ಅವರು ಪಾರ್ಟ್‌ನರ್‌ಶಿಪ್‌ನಲ್ಲಿ ಜಿಮ್‌ ನಡೆಸುತ್ತಿದ್ದ. ಇನ್ನು ಈ ದಾಳಿ ಹಿಂದಿನ ಉದ್ದೇಶ ಏನೆಂಬುದು ತನಿಖೆಯಲ್ಲಿ ತಿಳಿಯಲಿದೆ ಎಂದು ಹೇಳಿದ್ದಾರೆ.

ಬಿಷ್ಣೋಯಿ ಗ್ಯಾಂಗ್‌ನಿಂದ ಕುಕೃತ್ಯ

ಇನ್ನು ಡೆಡ್ಲಿ ಅಟ್ಯಾಕ್‌ ಹೊಣೆಯನ್ನು ಕುಖ್ಯಾತ ಗ್ಯಾಂಗ್‌ಸ್ಟರ್‌ಗಳ ತಂಡ ಬಿಷ್ಣೋಯಿ ಗ್ಯಾಂಗ್‌ ಹೊತ್ತುಕೊಂಡಿದೆ. ನಾದಿರ್‌ ಶಾನನ್ನು ಹತ್ಯೆಗೈದಿದು ತಾವೆ ಎಂದು ಬಿಷ್ಣೋಯಿ ಗ್ಯಾಂಗ್‌ ಘೋಷಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟೊಂದನ್ನೂ ಮಾಡಿದೆ. ಮತ್ತೊಂದೆಡೆ ಐದು ತನಿಖಾ ತಂಡಗಳು ಪ್ರಕರಣದ ತನಿಖೆ ನಡೆಸುತ್ತಿವೆ.

ಈ ಸುದ್ದಿಯನ್ನೂಓದಿ: Bihar shootout: ತರಗತಿಗೆ ಪಿಸ್ತೂಲ್‌ ತಂದು ಶೂಟ್‌ ಮಾಡಿದ ಬಾಲಕ; ಸೊಂಟಕ್ಕೆ ಗುಂಡೇಟು ತಗುಲಿ ವಿದ್ಯಾರ್ಥಿನಿ ಜೀವನ್ಮರಣ ಹೋರಾಟ

Leave a Reply

Your email address will not be published. Required fields are marked *