ನವದೆಹಲಿ: ಮುಂಬರುವ ಶೈಕ್ಷಣಿಕ ವರ್ಷದಿಂದ M.Phil ಕೋರ್ಸ್ ಸ್ಥಗಿತಗೊಳಿಸಲು ದೆಹಲಿ ವಿಶ್ವವಿದ್ಯಾಲಯ ಮುಂದಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಪ್ರಕಾರ ಮುಂದಿನ ಶೈಕ್ಷಣಿಕ ಅವಧಿಯಿಂದ M.Phil ಅನ್ನು ಸ್ಥಗಿತಗೊಳಿಸುವುದಾಗಿ ಅಧಿಸೂಚನೆಯನ್ನು ಹೊರಡಿಸಿದೆ. ವಿಶ್ವವಿದ್ಯಾಲಯವು 2022-23 ರಿಂದ ನೀತಿಯನ್ನು ಜಾರಿಗೆ ತರಲಿದೆ.
M.Phil ಕಾರ್ಯಕ್ರಮಗಳಿಗೆ ಯಾವುದೇ ಹೊಸ ಪ್ರವೇಶಗಳು ಇರುವುದಿಲ್ಲ, ಆದರೆ ಈಗಾಗಲೇ ದಾಖಲಾದ ವಿದ್ಯಾರ್ಥಿಗಳು ಕೋರ್ಸ್ ಅನ್ನು ಅಧ್ಯಯನ ಮಾಡುವುದನ್ನು ಮುಂದುವರೆಸುತ್ತಾರೆ. 2012-2013 ರಿಂದ ಎಂ.ಫಿಲ್, ದಾಖಲಾತಿಯು ಸ್ಥಿರವಾಗಿ ಬಹುಪಾಲು ಮಹಿಳೆಯರನ್ನು ಹೊಂದಿದ್ದು, ಪ್ರಸ್ತುತ ಶೇ.60 ರಷ್ಟಿದೆ ಎಂದು ಅವರು ಹೇಳಿದರು.
ಎಂ.ಫಿಲ್ ಕೋರ್ಸ್ ಹಲವಾರು ತಲೆಮಾರುಗಳಿಂದ ದೆಹಲಿ ವಿಶ್ವವಿದ್ಯಾಲಯ ಮತ್ತು ಇತರ ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ದೃಢವಾದ ಕೋರ್ಸ್ ಕೆಲಸ ಮತ್ತು ಉನ್ನತ ಸಂಶೋಧನೆಯ ಪರಿಚಯದ ಮೂಲಕ ಸಂಶೋಧನಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
“M.Phil ಸಂಶೋಧನಾ ಪದವಿಯು ಸ್ನಾತಕೋತ್ತರ ಪದವಿಯಿಂದ ಪ್ರತ್ಯೇಕವಾದ ಮತ್ತು ಅದೇ ಸಮಯದಲ್ಲಿ ಉನ್ನತ ಪದವಿಯಾಗಿದೆ.