Sunday, 15th December 2024

ದೆಹಲಿ ಮೇಯರ್, ಉಪಮೇಯರ್ ಆಯ್ಕೆ ಪ್ರಕ್ರಿಯೆ ಇಂದು

ನವದೆಹಲಿ: ಮೇಯರ್ ಮತ್ತು ಉಪಮೇಯರ್ ಆಯ್ಕೆ ಪ್ರಕ್ರಿಯೆ ಸೋಮವಾರ ನಡೆಯಲಿದೆ.

ದೆಹಲಿ ಮುನ್ಸಿಪಲ್ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಎರಡು ತಿಂಗಳಾದರೂ ಮೇಯರ್‌ ಯಾರೆಂಬುದರ ಆಯ್ಕೆ ಮಾತ್ರ ವಿಘ್ನಗಳೆದುರಾಗುತ್ತಲೇ ಇವೆ.

250 ಸ್ಥಾನಗಳ ದೆಹಲಿ ಪುರಸಭೆಯಲ್ಲಿ ಆಮ್ ಆದ್ಮಿ ಪಕ್ಷ 134 ಸ್ಥಾನಗಳನ್ನು ಗೆದ್ದು ಕೊಂಡಿದೆ. ಮೇಯರ್ ಹುದ್ದೆಯನ್ನು ಭದ್ರ ಪಡಿಸಿಕೊಳ್ಳಲು ಬೇಕಾದಷ್ಟು ಸೀಟುಗಳನ್ನು ಗೆದ್ದು, ಮೇಯರ್ ಸ್ಥಾನ ಸುಲಭವಾಗಿ ಸಿಗಲಿದೆ ಎಂದು ಭಾವಿಸಿದ್ದರು. ಆದರೆ, ಹಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎರಡು ತಿಂಗಳು ಕಳೆದರೂ ಮೇಯರ್ ಚುನಾವಣೆ ಪೂರ್ಣಗೊಂಡಿಲ್ಲ.

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಕಾಯಿದೆ, 1957 ರ ಪ್ರಕಾರ, ಮೇಯರ್ ಮತ್ತು ಉಪ ಮೇಯರ್ ಚುನಾವಣೆಯನ್ನು ಮೊದಲ ಪುರಸಭೆಯ ಸಭೆಗಳಲ್ಲಿ ಪೂರ್ಣಗೊಳಿಸಬೇಕು. ಆದರೆ, ಈವರೆಗೆ ಎರಡು ಬಾರಿ ಸಭೆ ನಡೆಸಿದರೂ ಚುನಾವಣೆ ಪೂರ್ಣಗೊಂಡಿಲ್ಲ.

ಜನವರಿ 6 ಮತ್ತು ಜನವರಿ 24 ರಂದು ನಡೆದ ಸಭೆಗಳಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ಉದ್ಭವಿಸಿದ ಹಲವು ವಿವಾದಗಳ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಯಿತು.