Friday, 22nd November 2024

‘ಅನಧಿಕೃತ’ವಾಗಿ ಕ್ಯಾಂಪಸ್‌ಗೆ ಭೇಟಿ ನೀಡಬೇಡಿ: ದೆಹಲಿ ವಿವಿ ನೋಟೀಸ್‌

ವದೆಹಲಿ: ಮುಂದಿನ ದಿನಗಳಲ್ಲಿ ‘ಅನಧಿಕೃತ’ವಾಗಿ ಕ್ಯಾಂಪಸ್‌ಗೆ ಭೇಟಿ ನೀಡದಂತೆ ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿಗೆ ಎಚ್ಚರಿಕೆಯ ನೋಟಿಸ್‌ ನೀಡುವುದಾಗಿ ದೆಹಲಿ ವಿಶ್ವವಿದ್ಯಾಲಯ ಮಂಗಳವಾರ ತಿಳಿಸಿದೆ.

ರಾಹುಲ್‌ ಗಾಂಧಿ ಅವರು ಕಳೆದ ಶುಕ್ರವಾರ ಸ್ನಾತಕೋತ್ತರ ವಿದ್ಯಾರ್ಥಿಗಳ ಬಾಲಕರ ಹಾಸ್ಟೆಲ್‌ಗೆ ಭೇಟಿ ನೀಡಿ, ವಿದ್ಯಾರ್ಥಿ ಗಳೊಂದಿಗೆ ಮಾತುಕತೆ ನಡೆಸಿ, ಊಟ ಸವಿದಿದ್ದರು. ಈ ಬೆನ್ನಲ್ಲೇ ದೆಹಲಿ ವಿಶ್ವವಿದ್ಯಾಲಯ ಈ ನಿರ್ಣಯ ತೆಗೆದುಕೊಂಡಿದೆ.

ರಾಹುಲ್ ಅವರ ಈ ರೀತಿಯ ಭೇಟಿ ವಿದ್ಯಾರ್ಥಿಗಳ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತದೆ. ಅಲ್ಲದೇ ವಿದ್ಯಾರ್ಥಿಗಳ ಭೇಟಿಗೆ ಕ್ಯಾಂಪನ್‌ನ ಶಿಷ್ಟಾಚಾರ ಅನುಸರಿಸಬೇಕಿರು ತ್ತದೆ. ಇದನ್ನು ತಿಳಿಸುವ ಸಲುವಾಗಿ ರಾಹುಲ್‌ಗೆ ನೋಟಿಸ್ ನೀಡಲಾಗುತ್ತಿದೆ ಎಂದು ವಿವಿ ರಿಜಿಸ್ಟ್ರಾರ್‌ ವಿಕಾಸ್‌ ಗುಪ್ತ ತಿಳಿಸಿದ್ದಾರೆ.

‘ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಡಳಿತ ಮಂಡಳಿಗೆ ಒತ್ತಡ ಇದೆ’ ಎಂದು ಭಾರತದ ರಾಷ್ಟ್ರೀಯ ವಿದ್ಯಾರ್ಥಿ ಗಳ ಒಕ್ಕೂಟ (ಎನ್‌ಎಸ್‌ಯುಐ) ಆರೋಪಿಸಿದೆ.ಈ ಆರೋಪವನ್ನು ತಳ್ಳಿಹಾಕಿರುವ ರಿಜಿಸ್ಟ್ರಾರ್‌, ಇದು ಶಿಸ್ತು ಪಾಲಿಸುವ ವಿಷಯವಾಗಿದೆ ಎಂದಿದ್ದಾರೆ.