Friday, 22nd November 2024

ದೇಶಾದ್ಯಂತ ಸಂಚಲನ ಮೂಡಿಸಿದ್ದ ದಿನ ಇಂದು ?

ನವದೆಹಲಿ: ಸಕಲ ಭಾರತೀಯ ಪ್ರಜೆಗಳಿಗೆ ಇಂದಿನ ದಿನ ಮರೆಯಲಾಗದ್ದು. ಅದೇ ನಾಲ್ಕು ವರ್ಷಗಳ ಹಿಂದೆ, 2016ರ ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಲೈವ್ ಬಂದು ಡಿಮಾನಿಟೈಸೇಷನ್​ ಬಗ್ಗೆ ಹೇಳಿದ್ದೇ ತಡ, ಇಡಿ ದೇಶಾದ್ಯಂತ ದೊಡ್ಡ ಸಂಚಲನವೇ ಸೃಷ್ಟಿ ಆಗಿತ್ತು.

ಡಿಮಾನಿಟೈಸೇಷನ್​ ಕುರಿತು ಈ ನಡುವೆ ನಾನಾ ರೀತಿಯ ವ್ಯಾಖ್ಯಾನಗಳು, ಅಭಿಪ್ರಾಯಗಳು ಬಂದುಹೋಗಿವೆ. ಇದೀಗ ನಾಲ್ಕನೇ ವರ್ಷದ ಸಂದರ್ಭದಲ್ಲಿ ಪ್ರತಿಪಕ್ಷ ಡಿಮಾನಿಟೈಸೇಷನ್ ವಿಷಯದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಿದ ಬೆನ್ನಿಗೇ ಪ್ರಧಾನಿ ಅದಕ್ಕೆ ತಕ್ಕ ಉತ್ತರವನ್ನೇ ನೀಡಿದ್ದಾರೆ.

ಕಪ್ಪು ಹಣವನ್ನು ಕಡಿಮೆ ಮಾಡುವಲ್ಲಿ, ತೆರಿಗೆ ಪಾವತಿ ಹೆಚ್ಚಿಸುವಲ್ಲಿ ಹಾಗೂ ಪಾರದರ್ಶಕತೆಯನ್ನು ವೃದ್ಧಿಸುವಲ್ಲಿ ಡಿಮಾನಿಟೈಸೇಷನ್​ ಪ್ರಮುಖ ಪಾತ್ರ ವಹಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ. ತೆರಿಗೆ ಪಾವತಿಸದೇ ಇರುವ 13 ಸಾವಿರ ಕೋಟಿ ರೂ.ಗೂ ಮಿಕ್ಕಿದ ಸೆಲ್ಫ್​ ಅಸೆಸ್​​ಮೆಂಟ್​ ಟ್ಯಾಕ್ಸ್​ ತೆರಿಗೆ ಇದರಿಂದಾಗಿಯೇ ಸಂಗ್ರಹವಾಗಿದೆ.

ಮಾತ್ರವಲ್ಲ, ನಗದು ಚಲಾವಣೆ ಕಡಿಮೆಯಾಗಿದೆ. ಉಗ್ರ ಹಾಗೂ ಎಡಪಂಥೀಯ ಸಂಘಟನೆಗಳಿಗೆ ಹೋಗುತ್ತಿದ್ದ ಆರ್ಥಿಕ ನೆರವು ಕೂಡ ತಗ್ಗಿದೆ ಎಂಬುದಾಗಿ ಮೋದಿ ಸಮರ್ಥಿಸಿಕೊಂಡಿದ್ದಾರೆ.