ಮುಂಬೈ: ಮಹಾರಾಷ್ಟ್ರದ ಮುಂದಿನ ಸಿಎಂ ಯಾರಾಗ್ತಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಹಲವು ಹೈಡ್ರಾಮಾಗಳ ನಂತರ ದೇವೇಂದ್ರ ಫಡ್ನವೀಸ್(Devendra Fadnavis) ಅವರ ಹೆಸರು ಅಂತಿಮಗೊಂಡಿದೆ. ಸಿಎಂ ಸ್ಥಾನದ ಬಗ್ಗೆ ಬಿಜೆಪಿ ಮತ್ತು ಶಿವಸೇನೆಯ ಏಕನಾಥ್ ಶಿಂಧೆ(Eknath Shinde) ನಡುವೆ ಬರೋಬ್ಬರಿ 11ದಿನಗಳಿಂದ ನಡೆಯುತ್ತಿದ್ದ ಹಗ್ಗ-ಜಗ್ಗಾಟ ಕೊನೆಗೊಂಡಿದ್ದು, ಇಂದು ಮುಂಬೈನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ಫಡ್ನವೀಸ್ ಅವರನ್ನೇ ಮಹಾರಾಷ್ಟ್ರದ ಸಿಎಂ ಆಗಿ ಆಯ್ಕೆ ಮಾಡಿದೆ.
Devendra Fadnavis unanimously elected as BJP Legislative Party Leader. Sudhir Mungantiwar proposed his name, approved by Ravindra Chavan. In the presence of Nirmala Sitharaman & Vijay Rupani Devendra Fadnavis was elected as the BJP Legislative Party Leader. @Dev_Fadnavis pic.twitter.com/9vxaDbJazf
— Praveen Mudholkar (@JournoMudholkar) December 4, 2024
ಬಿಜೆಪಿ ಕೇಂದ್ರ ಪರಿವೀಕ್ಷಕ ವಿಜಯ್ ರೂಪಾಣಿ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ಶಾಸಕರು ಮತ್ತು ಮುಖಂಡರು ಭಾಗಿಯಾಗಿದ್ದರು. ಇದೀಗ ದೇವೇಂದ್ರ ಫಡ್ನವೀಸ್ ಹೆಸರು ಅಂತಿಮಗೊಂಡಿದೆ.
Mumbai: Maharashtra BJP chief Chandrashekhar Bawankule, says "We all fought a historical election in the leadership of Devendra Fadanvis and we won a historic mandate for Mahayuti. We are committed to taking Maharashtra to the number one position with the help of PM Modi. We… https://t.co/dtmTgq5bxW pic.twitter.com/cABq9ir40r
— ANI (@ANI) December 4, 2024
ನಾಳೆಯೇ ಪ್ರಮಾಣ ವಚನ ಸ್ವೀಕಾರ
ಇನ್ನು ಇಂದು ಸಂಜೆಯೇ ಮಹಾಯುತಿ ಮುಖಂಡರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ನಾಳೆ ದೇವೇಂದ್ರ ಫಡ್ನವೀಸ್ ಮತ್ತು ನೂತನ ಸಂಪುಟ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸಮಾರಂಭಕ್ಕೆ ಮುಂಬೈನ ಆಜಾದ್ ಮೈದಾನದಲ್ಲಿ ಎಲ್ಲಾ ರೀತಿಯ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸುಮಾರು 2,000 ವಿವಿಐಪಿಗಳು ಮತ್ತು ಸುಮಾರು 40,000 ಬೆಂಬಲಿಗರು ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿಯಿದೆ.
ನವೆಂಬರ್ 23 ರಂದು, ಮ 288 ಅಸೆಂಬ್ಲಿ ಸ್ಥಾನಗಳಲ್ಲಿ 230 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯ ಚುನಾವಣೆಯಲ್ಲಿ ಮುನ್ನಡೆದರು. ಬಿಜೆಪಿ 132 ಸ್ಥಾನಗಳನ್ನು ಗೆದ್ದು ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು, ಅದರ ಅತ್ಯಧಿಕ ಸಂಖ್ಯೆ, ಆದರೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ ಕ್ರಮವಾಗಿ 57 ಮತ್ತು 41 ಸ್ಥಾನಗಳನ್ನು ಗಳಿಸಿತು.
ಈ ಸುದ್ದಿಯನ್ನೂ ಓದಿ:Eknath Shinde: ಮಹಾಯುತಿ ಸಭೆ ರದ್ದು… ಏಕಾಏಕಿ ಸ್ವಗ್ರಾಮಕ್ಕೆ ತೆರಳಿದ ಏಕನಾಥ್ ಶಿಂಧೆ