Sunday, 15th December 2024

ಸಿಸಿಟಿವಿ ಕ್ಯಾಮೆರಾ ಅಳವಡಿಸಿ: ಡಿಜಿಸಿಎಗೆ ಮಹಿಳಾ ಆಯೋಗ ಸೂಚನೆ

ವದೆಹಲಿ: ಮದ್ಯದ ಅಮಲಿನಲ್ಲಿರುವ ವ್ಯಕ್ತಿಗಳು ವಿಮಾನ ಹತ್ತದಂತೆ, ಮದ್ಯ ಸೇವನೆ ಮಿತಿಗೊಳಿಸುವುದು, ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳುವಂತೆ ದೆಹಲಿ ಮಹಿಳಾ ಆಯೋಗವು ನಾಗರಿಕ ವಿಮಾನ ಯಾನ ನಿರ್ದೇಶನಾಲಯಕ್ಕೆ ಹೇಳಿದೆ.

ವಿಮಾನಗಳಲ್ಲಿ ಪ್ರಯಾಣಿಕರು ಅಶಿಸ್ತಿನಿಂದ ವರ್ತಿಸುತ್ತಿರುವ ಘಟನೆಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಡಿಸಿಡಬ್ಲ್ಯು ಹಲವು ಮಾರ್ಗಸೂಚಿಗಳನ್ನು ನೀಡಿದೆ.

ಡಿಜಿಸಿಎಗೆ ಬರೆದ ಪತ್ರದಲ್ಲಿ, ಲೈಂಗಿಕ ಕಿರುಕುಳದ ಬಗ್ಗೆ ವಿಮಾನ ಸಿಬ್ಬಂದಿಯನ್ನು ಸಂವೇದನಾ ಶೀಲಗೊಳಿಸಬೇಕು. ಇತ್ತೀಚಿನ ದಿನಗಳಲ್ಲಿ ವಿಮಾನ ಗಳಲ್ಲಿ ಅಶಿಸ್ತಿನ ಘಟನೆಗಳು ಹೆಚ್ಚುತ್ತಿರುವುದು ಪ್ರಯಾಣಿಕರಿಗೆ ಅತ್ಯಂತ ಅಹಿತಕರ ಮತ್ತು ಆಘಾತಕಾರಿ ಎಂದು ಆಯೋಗ ಹೇಳಿದೆ.

‘ಪ್ರಯಾಣಿಕರಿಂದ ಮಹಿಳೆಯರಿಗೆ ಆಗಿರುವ ಕಿರುಕುಳ ಬಗ್ಗೆ ಮಾಧ್ಯಮಗಳು ವರದಿ ಮಾಡಿದೆ.

ಈ ಘಟನೆಗಳ ಬಗ್ಗೆ ಸ್ವಯಂಪ್ರೇರಿತ ಕ್ರಮ ತೆಗೆದುಕೊಳ್ಳಲಾಗಿದೆ. ಅಂತಹ ಪ್ರಕರಣಗಳನ್ನು ನಿಭಾಯಿಸಲು ವಿಮಾನಯಾನ ಸಂಸ್ಥೆಗಳಿಗೆ ಹೊರಡಿಸಿದ ಮಾರ್ಗಸೂಚಿಗಳೊಂದಿಗೆ ಅವರು ತೆಗೆದುಕೊಂಡ ಕ್ರಮಗಳ ವಿವರಗಳನ್ನು ಕೋರಿ ಡಿಜಿಸಿಎಗೆ ನೋಟಿಸ್ ನೀಡಿದೆ ಎಂದು ಹೇಳಿದೆ.