Friday, 13th December 2024

ಗುಜರಾತ್ ಹೈಕೋರ್ಟ್‌ನ ವಜ್ರ ಮಹೋತ್ಸವದ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಗುಜರಾತ್ ಹೈಕೋರ್ಟ್‌ನ ವಜ್ರ ಮಹೋತ್ಸವದ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ ಮಾಡಿದರು.

ನ್ಯಾಯಾಂಗವು ಸಂವಿಧಾನ ಬಲಪಡಿಸಲು ಸೃಜಜನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದೆ. ದೇಶದ ಜನರ ಹಕ್ಕುಗಳನ್ನು ಕಾಪಾಡಲು, ರಾಷ್ಟ್ರೀಯ ಹಿತಾಸಕ್ತಿಗನುಗುಣವಾಗಿ ನ್ಯಾಯಾಂಗ ತನ್ನ ಕರ್ತವ್ಯ ನಿರ್ವಹಿಸುತ್ತಿದೆ ಎಂದರು.

ಕೊರೋನಾ ಸಂದರ್ಭ ಸುಪ್ರೀಂಕೋರ್ಟ್, ಹೈಕೋರ್ಟ್, ಜಿಲ್ಲಾ ನ್ಯಾಯಾಲಯಗಳು ಸಹ ವಿಡಿಯೋ ಕಾನ್ಫರೆನ್ಸ್ ಮೂಲಕ ಅನೇಕ ಪ್ರಕರಣಗಳನ್ನು ಆಲಿಸಿವೆ. ಅದು ನಮ್ಮ ಹೆಮ್ಮೆ ಎಂದು ನ್ಯಾಯಾಂಗ ವ್ಯವಸ್ಥೆಯನ್ನು ಶ್ಲಾಘಿಸಿದ್ದಾರೆ.