ಸೂರತ್: ಗುಜರಾತ್ ರಾಜ್ಯದ ಸೂರತ್ನಲ್ಲಿ ಉದ್ಯಮಿ ತಮ್ಮ ನಿವಾಸದಲ್ಲಿ ಕೋಟ್ಯಾಂ ತರ ರೂಪಾಯಿ ಬೆಲೆ ಬಾಳುವ ಗಣಪನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ.
ಕನುಭಾಯಿ ರಾಮ್ಜಿಭಾಯಿ ಅಸೋದರಿಯಾ ಎಂಬವರು ಬರೋಬ್ಬರಿ 600 ಕೋಟಿ ರೂಪಾಯಿ ಬೆಲೆ ಬಾಳುವ ವಜ್ರದ ಗಣಪ ನನ್ನು ಕೂರಿಸಿದ್ದಾರೆ. ಇವರು 15 ವರ್ಷಗಳ ಹಿಂದೆ ವ್ಯಾಪಾರಕ್ಕಾಗಿ ಬೆಲ್ಜಿಯಂಗೆ ಹೋಗಿದ್ದರು. ಅಲ್ಲಿಂದ ಕಚ್ಚಾ ವಜ್ರಗಳನ್ನು ತಂದಿ ದ್ದರು.
ಈ ವೇಳೆ ಅನುಭಾಯಿ ಅವರ ತಂದೆಗೆ ಮನೆಗೆ ತಂದಿರುವ ವಜ್ರದಲ್ಲಿ ಗಣಪನ ಮೂರ್ತಿ ಇದೆ ಎಂಬ ಕನಸು ಬಿದ್ದಿತ್ತಂತೆ. ನಂತರ ಹೋಗಿ ನೋಡಿದಾಗ ಇದು ಪತ್ತೆಯಾಗಿದೆ ಎಂದು ಕುನಭಾಯಿ ಹೇಳುತ್ತಾರೆ. ಈ ಗಣಪತಿ ಮೂರ್ತಿ 182.3 ಕ್ಯಾರೆಟ್ ವಜ್ರದಾಗಿದ್ದು, 36.5ಗ್ರಾಂ ತೂಕವಿದೆ. ಇದರ ಮಾರುಕಟ್ಟೆ ಬೆಲೆ 600 ಕೋಟಿ ರೂ ಎನ್ನಲಾಗಿದೆ.
600 ಕೋಟಿ ಬೆಲೆಯ ವಜ್ರದ ಗಣಪಈ ಕುರಿತು ಮಾತನಾಡಿರುವ ಉದ್ಯಮಿ ಕುನಭಾಯಿ, ನಮ್ಮದು ಕರಮ್ ಎಕ್ಸಪೋರ್ಟ್ ಡೈಮಂಡ್ ಎಂಬ ಕಂಪನಿ ಇದೆ. ಇದು ನೈಸರ್ಗಿಕ ವಾಗಿಯೇ ರೂಪುಗೊಂಡಿದೆ. ಕರಮ್ ಡೈಮಂಡ್ ಗಣೇಶ ಎಂದು ಕೂಡ ಕರೆಯಲಾಗುತ್ತದೆ.