Sunday, 15th December 2024

ಭವಾನಿಪುರದಲ್ಲಿ ದೀದಿ ಹವಾ: 58,389 ಮತಗಳಿಂದ ಗೆಲುವು

ಪಶ್ಚಿಮ ಬಂಗಾಳ : ಭವಾನಿಪುರ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 58,389 ಮತಗಳಿಂದ ಜಯಗಳಿಸಿದ್ದಾರೆ. ಇನ್ನೂ ಮತ ಏಣಿಕೆ ಜಾರಿಯಲ್ಲಿದ್ದು, ಅಂತಿಮ ಫಲಿತಾಂಶ ಇನ್ನಷ್ಟೇ ಬರಬೇಕಿದೆ.

ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಆರಂಭದಿಂದಲೂ ಭಾರೀ ಮುನ್ನಡೆ ಕಾಯ್ದುಕೊಂಡಿದ್ದರು. ಬಿಜೆಪಿಯ ಪ್ರಿಯಾಂಕ ಟಿಬ್ರೆವಾಲ್ ಅವರನ್ನು 58 ಸಾವಿರ ಮತಗಳ ಅಂತರದಿಂದ ಪರಾಭವ ಗೊಳಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನ ಉಳಿಸಿ ಕೊಳ್ಳಲು ಮಮತಾ ಬ್ಯಾನರ್ಜಿಗೆ ಉಪಚುನಾವಣೆ ಗೆಲುವು ಮುಖ್ಯವಾಗಿತ್ತು.

ಆರಂಭಿಕ ಹಂತದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಮಮತಾ ಬ್ಯಾನರ್ಜಿ ಗೆಲುವು ಸಾಧಿಸಿದ್ದು, ಟಿಎಂಸಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.

ಮತಏಣಿಕೆಯಲ್ಲಿ ಆರಂಭದಿಂದಲೂ ಮುನ್ನಡೆಯನ್ನು ದೀದಿ ಕಾಯ್ದುಕೊಂಡಿದ್ದರು. ಇದೀಗ ಅಂತಿಮ ಫಲಿತಾಂಶ ಪ್ರಕಟ ಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೂ ವಾಲ್ ವಿರುದ್ಧ 58 ಸಾವಿರಕ್ಕೂ ಹೆಚ್ಚು ಮತಗಳಿಂದ ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ.

ಭವಾನಿಪುರ ಉಪಚುನಾವಣೆಯ ಮತ ಎಣಿಕೆಯಲ್ಲಿ ಹತ್ತನೇ ಸುತ್ತು ಪೂರ್ಣಗೊಂಡಾಗ ಮಮತಾ ಬ್ಯಾನರ್ಜಿ ಅವರು 31,645 ಮತಗಳ ಅಂತರದೊಂದಿಗೆ ಮುನ್ನಡೆ ಕಾಯ್ದು ಕೊಂಡಿದ್ದರು.

ಹತ್ತನೇ ಸುತ್ತಿನ ಮತ ಎಣಿಕೆಯ ಬಳಿಕ ಮಮತಾ ಬ್ಯಾನರ್ಜಿ ಅವರು 42,122 ಮತಗಳನ್ನು ಗಳಿಸಿದರೆ, ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲಾ ಅವರು 10,477 ಮತಗಳನ್ನು ಗಳಿಸಿದರು. ಸಿಪಿಎಂನ ಶ್ರೀಜಿಬ್‌ ಬಿಸ್ವಾಸ್‌ 1,234 ಮತಗಳನ್ನು ಗಳಿಸಿದರು.