Friday, 22nd November 2024

ಪ್ರತಿ ಲೀಟರ್‌ ಡೀಸೆಲ್​ಗೆ 25 ರೂ. ಹೆಚ್ಚಳ

ನವದೆಹಲಿ/ಮುಂಬೈ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಶೇ.40 ರಷ್ಟು ಡೀಸೆಲ್ ಬೆಲೆ ಏರಿಕೆಯಾಗಿದೆ. ಈ ಮೂಲಕ ಭಾರತದಲ್ಲೂ ಪ್ರತಿ ಲೀಟರ್‌ಗೆ ಡೀಸೆಲ್​ಗೆ ಸುಮಾರು 25 ರೂಪಾಯಿಗಳಷ್ಟು ಹೆಚ್ಚಳವಾಗಿದೆ.
ಬೃಹತ್ ಬಳಕೆದಾರರಿಗೆ ಮಾರಾಟವಾಗುವ ಡೀಸೆಲ್ ಬೆಲೆ ಲೀಟರ್‌ಗೆ ಸುಮಾರು 25 ರೂಪಾಯಿಗಳಷ್ಟು ಏರಿಕೆಯಾಗಿರುವುದು ವಿವಿಧ ರೀತಿಯಲ್ಲಿ ಪರಿಣಾಮ ಬೀರಲಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡೀಸೆಲ್ ಬೆಲೆಯ ಹೆಚ್ಚಳದಿಂದ ನಯಾರಾ ಎನರ್ಜಿ, ಜಿಯೋ-ಬಿಪಿ ಮತ್ತು ಶೆಲ್‌ನಂತಹ ಖಾಸಗಿ ಚಿಲ್ಲರೆ ವ್ಯಾಪಾರಿಗಳು ಹೆಚ್ಚು ಹಾನಿಗೊಳಗಾಗಿದ್ದಾರೆ. ಆದರೆ ಈಗ ಪಂಪ್‌ಗಳನ್ನು ಮುಚ್ಚುವುದು ಹೆಚ್ಚು ಕಾರ್ಯ ಸಾಧ್ಯವಾದ ಪರಿಹಾರ ವಾಗಿದೆ ಎನ್ನಲಾಗಿದೆ. ಆದರೆ ಈ ಕಂಪನಿಗಳು ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರ ವಿವರ:

ಬಾಗಲಕೋಟೆ – 85.51
ಬೆಂಗಳೂರು – 85.01
ಬೆಂಗಳೂರು ಗ್ರಾಮಾಂತರ – 84.68
ಬೆಳಗಾವಿ – 84.57
ಬಳ್ಳಾರಿ – 86.56
ಬೀದರ್ – 85.30
ಬಿಜಾಪುರ – 85.30
ಚಾಮರಾಜನಗರ – 85.12
ಚಿಕ್ಕಬಳ್ಳಾಪುರ – 85.01
ಚಿಕ್ಕಮಗಳೂರು – 87.26
ಚಿತ್ರದುರ್ಗ – 85.87
ದಕ್ಷಿಣ ಕನ್ನಡ – 84.72
ದಾವಣಗೆರೆ – 86.09
ಧಾರವಾಡ – 84.79
ಗದಗ – 84.41

ಕಲಬುರ್ಗಿ – 84.45
ಹಾಸನ – 84.72
ಹಾವೇರಿ – 85.76
ಕೊಡಗು – 86.06
ಕೋಲಾರ – 84.89
ಕೊಪ್ಪಳ- 85.89
ಮಂಡ್ಯ – 85.19
ಮೈಸೂರು – 84.56
ರಾಯಚೂರು – 84.87
ರಾಮನಗರ – 85.43
ಶಿವಮೊಗ್ಗ – 85.68
ತುಮಕೂರು – 85.83
ಉಡುಪಿ – 85.07
ಉತ್ತರ ಕನ್ನಡ – 86.71
ಯಾದಗಿರಿ – 85.44ಇಂಧನ ಖರೀದಿಸಲು ಬಸ್ ಫ್ಲೀಟ್ ಆಪರೇಟರ್‌ಗಳು ಮತ್ತು ಮಾಲ್‌ಗಳಂತಹ ಬೃಹತ್ ಬಳಕೆದಾರರು ಪೆಟ್ರೋಲ್ ಬಂಕ್‌ಗಳಲ್ಲಿ ಖರೀದಿ ಆರಂಭಿಸಿವೆ.