Thursday, 12th December 2024

ಮಕ್ಕಳು ಮತ್ತು ಯುವಜನರಿಗಾಗಿ ಡಿಜಿಟಲ್ ಲೈಬ್ರರಿ

ವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಬಜೆಟ್ (Budget 2023) ಮಂಡಿಸುತ್ತಿದ್ದಾರೆ.

ಬಜೆಟ್‌ ಮಂಡನೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿ ಸುತ್ತ, ಇದು ಅಮೃತಕಾಲದ ಅವರ ಮೊದಲ ಬಜೆಟ್. ಮಕ್ಕಳು ಮತ್ತು ಯುವಜನರಿಗಾಗಿ ಡಿಜಿಟಲ್ ಲೈಬ್ರರಿಗಳು ಸಿದ್ಧಪಡಿಸಲಾಗುತ್ತಿದೆ. ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯವನ್ನು ಪಂಚಾಯತ್ ಮತ್ತು ವಾರ್ಡ್ ಮಟ್ಟಕ್ಕೆ ತೆರೆಯಲಾಗುವುದು. ಪ್ರಾದೇಶಿಕ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪುಸ್ತಕಗಳು ಲಭ್ಯವಿರುತ್ತವೆ. ವಯಸ್ಸಿಗೆ ಅನುಗುಣವಾಗಿ ಪುಸ್ತಕಗಳು ಲಭ್ಯ ವಿರುತ್ತವೆ. ರಾಜ್ಯಗಳು ಮತ್ತು ಅವುಗಳಿಗಾಗಿ ನೇರ ಗ್ರಂಥಾಲಯಗಳನ್ನು ಪ್ರೋತ್ಸಾಹಿಸ ಲಾಗುವುದು.

ಈ ಬಾರಿಯ ಬಜೆಟ್ ನಲ್ಲಿ ರೈತರಿಗೆ ಯುವಕರು, ಮಹಿಳೆಯರು, ಒಬಿಸಿ ಈ ಸಮುದಾಯಕ್ಕೆ ಬಜೆಟ್ ನಲ್ಲಿ ಪೋಕಸ್ ಮಾಡಲಾ ಗಿದೆ. ಆಧಾರ್, ಯುಪಿಐ, ಕೊವಿನ್ ವಿಶ್ವಮಾನ್ಯತೆ ಸಿಕ್ಕಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಗೆ 2 ಲಕ್ಷ ಕೋಟಿ ರೂ. ಮಿಸಲಿಡ ಲಾಗಿದೆ. ಒಂದು ವರ್ಷ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮಹಿಳೆಯರ ಆರ್ಥಿಕ ಸಬಲೀಕರಣದ ಗುರಿ ಹೊಂದಲಾಗಿದ್ದು, ಕರಕುಶಲಕರ್ಮಿಗಳಿಗೆ ನುತನ ಯೋಜನೆ ಘೋಷಣೆ ಮಾಡಲಾ ಗಿದ್ದು, ಪ್ರಧಾನಿ ವಿಶ್ವಕರ್ಮ ಕೌಶಲ್ಯ ಯೋಜನೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಉಜ್ವಲ ಯೋಜನೆಯಡಿ 6 ಕೋಟಿ ಜನರಿಗೆ ಸಂಪರ್ಕ, ಆರ್ಥಿಕತೆಯು ಹೆಚ್ಚು ಔಪಚಾರಿಕವಾಗಿದೆ. ಸಿರಿಧಾನ್ಯಗಳ ಕೃಷಿಗೆ ಹೊಸ ಯೋಜನೆ ಘೋಷಣೆ ಮಾಡಲಾಗಿದ್ದು, ಶ್ರೀ ಅನ್ನ ಜೋಳ, ಶ್ರೀ ಅನ್ನ ರಾಗಿ, ಸಜ್ಜೆ ಸಿರಿಧಾನ್ಯಗಳ ಯೋಜನೆ ಜಾರಿ, ಹಸಿರು ಕ್ರಾಂತಿ ಸರ್ವರನ್ನು ಒಳಗೊಂಡ ಅಭಿವೃದ್ಧಿ, ಮಹಿಳೆಯರ ಆರ್ಥಿಕ ಸಬಲೀಕರಣ ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದು ಹೇಳಿದ್ದಾರೆ.

ರೈತರು, ಪರಿಶಿಷ್ಟ ಜಾತಿಯ ಮಹಿಳೆಯರಿಂದ ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗಿದೆ. ವಿಶೇಷವಾಗಿ, ಜಮ್ಮು ಮತ್ತು ಕಾಶ್ಮೀರ ಲಡಾಖ್ಗೆ ಒತ್ತು ನೀಡಲಾಗಿದೆ.ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ವನ್ನು ರಚಿಸಲಾಗುವುದು. ಸ್ಟಾರ್ಟ್ ಅಪ್ ಗಳ ಬೆಳವಣಿಗೆಗೆ ಅಂತರ್ಗತ ಪರಿಹಾರ ಇರುತ್ತದೆ. ಕೃಷಿ-ಸ್ಟಾರ್ಟ್ ಅಪ್ ಗಳನ್ನು ತೆರೆಯಲು ಅವರನ್ನು ಪ್ರೋತ್ಸಾಹಿಸಲು ಕೃಷಿ ವರ್ಧನೆ ನಿಧಿಯನ್ನು ನೀಡಲಾಗುವುದು. ನಾವು ವಿಶ್ವದಲ್ಲೇ ಅತಿ ದೊಡ್ಡ ಆಹಾರ ಧಾನ್ಯಗಳ ಉತ್ಪಾದಕರು ಮತ್ತು ಎರಡನೇ ಅತಿದೊಡ್ಡ ರಫ್ತುದಾರರಾಗಿದ್ದೇವೆ ಎಂದರು.

ಯುವ ಉದ್ಯಮಿಗಳು ಕೃಷಿ-ಸ್ಟಾರ್ಟ್ ಅಪ್ ಗಳನ್ನು ಪ್ರೋತ್ಸಾಹಿಸಲು ಕೃಷಿ ವೇಗವರ್ಧಕ ನಿಧಿಯನ್ನು ಸ್ಥಾಪಿಸಬೇಕು. ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ರೂ. ಮೀಸಲಿಡಲಾಗುವುದು. ಜಿಡಿಪಿಯ ಶೇ. 3.3 ರಷ್ಟು ಉದ್ಯೋಗ ಸೃಷ್ಟಿಗೆ ಮೀಸಲಿಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

Read E-Paper click here