Thursday, 21st November 2024

ಎಲ್ಲಾ ಡಿಜಿಟಲ್ ವ್ಯವಸ್ಥೆಗಳಿಗೆ ‘ಪ್ಯಾನ್’ ಕಡ್ಡಾಯ

ವದೆಹಲಿ: ಐದನೇ ಬಾರಿ ಕೇಂದ್ರ ವಿತ್ತಸಚಿವೆ ನಿರ್ಮಲ ಸೀತಾರಾಮನ್‌ ಅವರು 2023-2024 ನೇ ಸಾಲಿನ ಕೇಂದ್ರ ಬಜೆಟ್‌ ಅನ್ನು ಮಂಡನೆ ಮಾಡುತ್ತಿದ್ದಾರೆ.

ಬಜೆಟ್‌ ಮಂಡನೆಗೂ ಮುನ್ನ ಮಾತನಾಡಿ, ಅಮೃತ ಕಾಲದ ಮೊದಲ ಬಜೆಟ್‌ ಇದಾಗಿದ್ದು, ಭಾರತದ ಆರ್ಥಿಕತೆಯು ಸರಿಯಾದ ಹಾದಿಯಲ್ಲಿದೆ ಮತ್ತು ಉಜ್ವಲ ಭವಿಷ್ಯದತ್ತ ಸಾಗು ತ್ತಿದೆ ಎಂದು ತಿಳಿಸಿದರು.

ಮಹಿಳೆಯರು, ಯುವಕರು, ಒಬಿಸಿ ದಲಿತರಿಗೆ ಮನ್ನಣೆ ನೀಡುವುದು ನಮಗೆ ಬಹಳ ಮುಖ್ಯವಾಗಿದೆ. ಇದಲ್ಲದೇ ಕೋವಿನ್‌, ಆಧಾರ್‌, ಯುಪಿಐ ವಿಶ್ವದ ಮಾನ್ಯತೆ ಪಡೆದು ಕೊಂಡಿದೆ ಎಂದು ತಿಳಿಸಿದರು.

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ, 28 ತಿಂಗಳವರೆಗೆ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಧಾನ್ಯಗಳನ್ನು ಪೂರೈಸುವ ಯೋಜನೆಯೊಂದಿಗೆ ಯಾರೂ ಹಸಿವಿನಿಂದ ಮಲಗದಂತೆ ನಾವು ಖಚಿತಪಡಿಸಿದ್ದೇವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾ ರಾಮನ್ ಹೇಳಿದರು. ಇದೇ ವೇಳೆ, ಅವರು ಗರೀಬ್‌ ಕಲ್ಯಾಣ ಯೋಜನೆ ಮುಂದಿನ ಒಂದು ವರ್ಷಕ್ಕೆ ವಿಸ್ತರಣೆ ಮಾಡಲಾಗಿದೆ ಅಂತ ತಿಳಿಸಿದರು.

ಸಾಮಾನ್ಯ ಗುರುತಿಸುವಿಕೆಯಾಗಿ ಬಳಸಲಾಗುವುದು ಎಂದು ತಿಳಿಸಿದರು. ನಿರ್ದಿಷ್ಟ ಸರ್ಕಾರಿ ಸಂಸ್ಥೆಗಳ ಎಲ್ಲಾ ಡಿಜಿಟಲ್ ವ್ಯವಸ್ಥೆಗಳಿಗೆ ಪ್ಯಾನ್ ಅನ್ನು ಸಾಮಾನ್ಯ ಗುರುತಿಸುವಿಕೆಯಾಗಿ ಬಳಸಲಾಗುವುದು.

Read E-Paper click here