ನವದೆಹಲಿ: ಡಿಜಿಟಲ್ ಸುದ್ದಿ ವೇದಿಕೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿಯೂ ಸರ್ಕಾರಿ ಜಾಹೀರಾತು ಪ್ರಕಟಿಸಲು ಅವಕಾಶ ಕಲ್ಪಿಸುವ ಜಾಹೀರಾತು ನೀತಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ ಬಿಡುಗಡೆ ಮಾಡಿದ 2023ರ ಡಿಜಿಟಲ್ ಜಾಹೀರಾತು ನೀತಿಯು, ವೆಬ್‌ಸೈಟ್‌ಗಳು, ಮೊಬೈಲ್ ಅಪ್ಲಿಕೇಶನ್ ಗಳು, ಡಿಜಿಟಲ್ ಆಡಿಯೊ ಪ್ಲಾಟ್‌ಫಾರ್ಮ್‌ಗಳು, ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಸಬಲೀ ಕರಿಸುವ ನೀತಿಯನ್ನು ಹೊಂದಿದೆ. ಇವರು ಇನ್ನು ಮುಂದೆ ಸರ್ಕಾರಿ ಜಾಹೀರಾತುಗಳನ್ನು ಪ್ರದರ್ಶಿಸಬಹುದು.
ಪ್ರತಿ ತಿಂಗಳು ಕನಿಷ್ಠ 2.5 ಲಕ್ಷ ಬಳಕೆ ದಾರರನ್ನು ಹೊಂದಿದ ವೆಬ್ಸೈಟ್‌ಗಳು, ಒಟಿಟಿ ಹಾಗೂ ಪಾಡ್‌ಕಾಸ್ಟ್‌ಗಳ ರೀತಿಯ ಡಿಜಿಟಲ್ ವೇದಿಕೆಗಳಲ್ಲಿ ಸರ್ಕಾರಿ ಜಾಹೀರಾತು ನೀಡಲು ಅವಕಾಶ ಕಲ್ಪಿಸುವ ಡಿಜಿಟಲ್ ಜಾಹೀರಾತು ನೀತಿಯನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯ ವತಿಯಿಂದ ರೂಪಿಸಲಾಗಿದೆ.
ಡಿಜಿಟಲ್ ಮಾಧ್ಯಮಗಳಲ್ಲಿಯೂ ಪ್ರಚಾರ ನಡೆಸಲು ಕೇಂದ್ರೀಯ ಸಂವಹನ ಬ್ಯುರೋಗೆ ಈ ನೀತಿ ಅಧಿಕಾರ ನೀಡುತ್ತದೆ. ವೆಬ್ಸೈಟ್‌ಗಳನ್ನು ಪಟ್ಟಿ ಮಾಡುವ ಪ್ರಕ್ರಿಯೆ ಸರಳಗೊಳಿಸುವವುದರೊಂದಿಗೆ ಮೊಬೈಲ್ ಆಪ್‌ಗಳ ಮೂಲಕ ಸಾರ್ವಜನಿಕ ಸೇವಾ ಅಭಿಯಾನಗಳ ಸಂದೇಶಗಳನ್ನು ಪ್ರಸಾರ ಮಾಡಲು ಇದರಿಂದ ಅನುಕೂಲವಾಗಲಿದೆ ಎಂದು ಸರ್ಕಾರ ಹೇಳಿದೆ. 2016ರ ನೀತಿ ಯನ್ನು ಹಿಂದಿನ ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶ ನಾಲಯ ಬಿಡುಗಡೆ ಮಾಡಿದೆ.
2020ರ ಮುದ್ರಣ ಮಾಧ್ಯಮ ಜಾಹೀರಾತು ನೀತಿಯ ಅಡಿಯಲ್ಲಿ, ಪತ್ರಿಕೆಗಳ ವೆಬ್‌ಸೈಟ್‌ಗಳು ಒಳಗೊಂಡಿರುವುದಿಲ್ಲ. ಹೊಸ ನೀತಿಯ ಮೂಲಕ, ಸುದ್ದಿ ವೆಬ್‌ಸೈಟ್‌ಗಳು ಮತ್ತು ಅವುಗಳ ಅಪ್ಲಿಕೇಶನ್‌ಗಳು ಜಾಹೀರಾತನ್ನು ಪಡೆಯಬಹುದು. ಇದರಲ್ಲಿ ಮುದ್ರಣ ಆವೃತ್ತಿಗಳ ಇ-ಪೇಪರ್‌ಗಳು ಸೇರಿಲ್ಲ.
ಹೊಸ ನೀತಿ ಅನ್ವಯ ಜಾಹೀರಾತು ದರಕ್ಕೆ ಸ್ಪರ್ಧಾತ್ಮಕ ಬಿಡ್ಡಿಂಗ್ ವ್ಯವಸ್ಥೆ ಪರಿಚಯಿಸಲಾಗಿದೆ. ಪ್ರಸ್ತುತ ಸಾಮಾಜಿಕ ಮಾಧ್ಯಮ ವೇದಿಕೆಗಳು ಸಾರ್ವ ಜನಿಕ ಸಂವಹನಕ್ಕೆ ಜನಪ್ರಿಯ ಮಾರ್ಗಗಳಾಗಿವೆ.