Saturday, 7th September 2024

ಡಿಜಿಟಲ್ ಇಂಡಿಯಾ ಪ್ರಶಸ್ತಿ ಪ್ರದಾನ ನಾಳೆ

ವದೆಹಲಿ: ಸರ್ಕಾರಿ ಸಂಸ್ಥೆಗಳ ನವೀನ ಡಿಜಿಟಲ್ ಉಪಕ್ರಮಗಳನ್ನು ಪ್ರೋತ್ಸಾಹಿಸುವ ಮತ್ತು ಗೌರವಿಸುವ ಡಿಜಿಟಲ್ ಇಂಡಿಯಾ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಪ್ರದಾನ ಮಾಡಲಿದ್ದಾರೆ.

ದೇಶವನ್ನು ಡಿಜಿಟಲ್ ಸಶಕ್ತ ಸಮಾಜ ಮತ್ತು ಜ್ಞಾನ ಆರ್ಥಿಕತೆಯಾಗಿ ಪರಿವರ್ತಿಸಲು ಡಿಜಿಟಲ್ ಇಂಡಿಯಾ ಕಾರ್ಯಕ್ರಮ ವನ್ನು ಸರ್ಕಾರ ರೂಪಿಸಿದೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನವದೆಹಲಿಯಲ್ಲಿ ನಡೆಯಲಿದೆ. ಡಿಜಿಟಲ್ ಇಂಡಿಯಾ ಅವಾರ್ಡ್ಸ್ 2022 ಡಿಜಿಟಲ್ ಇಂಡಿಯಾ ದೃಷ್ಟಿಯನ್ನು ಪೂರೈಸುವಲ್ಲಿ ಸರ್ಕಾರಿ ಘಟಕ ಗಳನ್ನು ಮಾತ್ರವಲ್ಲದೆ ಸ್ಟಾರ್ಟ್‌ಅಪ್‌ಗಳು ಮತ್ತು ತಳಮಟ್ಟದ ಡಿಜಿಟಲ್ ಉಪಕ್ರಮ ಗಳನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ.

ಡಿಜಿಟಲ್ ಇಂಡಿಯಾ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆಯು ರಾಷ್ಟ್ರೀಯ ಪುರಸ್ಕಾರ್ ಪೋರ್ಟಲ್ (https://awards.gov.in) ಮೂಲಕ ಸರ್ಕಾರಿ ಘಟಕಗಳಿಂದ ಡಿಜಿಟಲ್ ಉಪಕ್ರಮಗಳ ನಾಮನಿರ್ದೇಶನವನ್ನು ಒಳಗೊಂಡಿರುತ್ತದೆ. ಇದನ್ನು ಗೃಹ ಸಚಿವಾಲಯದ ಪ್ರಶಸ್ತಿಗಳ ಮಹಾನಿರ್ದೇಶಕರು ನಿರ್ವಹಿಸುತ್ತಾರೆ ಎಂದು ಸಚಿವಾಲಯ ತಿಳಿಸಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಕಮ್ಯುನಿಕೇಷನ್ಸ್ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಅಲ್ಕೇಶ್ ಕುಮಾರ್ ಶರ್ಮಾ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

 
Read E-Paper click here

error: Content is protected !!