ನವದೆಹಲಿ: ದೇಶದ ಮೊದಲ ಒಲಿಂಪಿಕ್ ಪದಕ ವಿಜೇತ ಮಹಿಳಾ ಜಿಮ್ನಾಸ್ಟ್(Gymnastics) ದೀಪಾ ಕರ್ಮಾಕರ್(Dipa Karmakar) ನಿವೃತ್ತಿ ಘೋಷಿಸಿದ್ದಾರೆ. ರಿಯೋ ಒಲಿಂಪಿಕ್ಸ್ 2016 ರಲ್ಲಿ ನಾಲ್ಕನೇ ಸ್ಥಾನ ಪಡೆದ ಭಾರತದ ಸ್ಟಾರ್ ಜಿಮ್ನಾಸ್ಟ್ ದೀಪ ನೀವೃತ್ತಿ ಹೊಂದುತ್ತಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ತೀವ್ರ ಆರೋಗ್ಯ ಸಮಸ್ಯೆಯಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.
ಕಷ್ಟಕರವಾದ ಪ್ರೊಡುನೋವಾ ವಾಲ್ಟ್ ಮಾಡಲು ಹೆಸರುವಾಸಿಯಾದ ದೀಪಾ ಕೆಲವು ದೈಹಿಕ ಸಮಸ್ಯೆಯನ್ನು ಹೊಂದಿದ್ದು, ದೇಹದ ಪರಿಸ್ಥಿತಿಯನ್ನು ಪರಿಗಣಿಸಿ, ಅವರು ನಿವೃತ್ತಿಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ ತಮ್ಮ ನಿವೃತ್ತಿ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಸುದೀರ್ಘ ಪೋಸ್ಟ್‌ವೊಂದನ್ನು ಮಾಡಿರುವ ದೀಪಾ, ಸಾಕಷ್ಟು ಯೋಚಿಸಿದ ನಂತರ ನಾನು ಸ್ಪರ್ಧಾತ್ಮಕ ಜಿಮ್ನಾಸ್ಟಿಕ್ಸ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಇದು ಸುಲಭದ ನಿರ್ಧಾರವಲ್ಲ. ಆದರೆ ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ಜಿಮ್ನಾಸ್ಟಿಕ್ಸ್ ನನ್ನ ಜೀವನದ ಒಂದು ದೊಡ್ಡ ಭಾಗವಾಗಿದೆ ಮತ್ತು ಪ್ರತಿ ಕ್ಷಣಕ್ಕೂ ನಾನು ಕೃತಜ್ಞಳಾಗಿದ್ದೇನೆ,” ಎಂದು ಅವರು ಬರೆದುಕೊಂಡಿದ್ದಾರೆ.
ಅಲ್ಲದೇ ಅವರು ಸೋಶಿಯಲ್ ಮೀಡಿಯಾದ ಮೂಲಕವೇ ಅನೇಕ ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ ಮತ್ತು ಅವರ ನಿರ್ಧಾರದ ನಿಜವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ದೀಪಾ ಇತ್ತೀಚೆಗೆ ಏಷ್ಯನ್ ಚಾಂಪಿಯನ್ಶಿಪ್ ಗೆದ್ದ ಮೊದಲ ಭಾರತೀಯ ಜಿಮ್ನಾಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಏಷ್ಯನ್ ಜಿಮ್ನಾಸ್ಟಿಕ್ಸ್ ಚಾಂಪಿಯನ್ಶಿಪ್ 2024ರಲ್ಲಿ ದೀಪಾ ಕರ್ಮಾಕರ್ ಏಷ್ಯನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.
ದೀಪಾ ಸಾಧನೆ ಪಟ್ಟಿ ಹೀಗಿದೆ
- 2014ರಲ್ಲಿ ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ ವಾಲ್ಟ್ ಫೈನಲ್‌ನಲ್ಲಿ ದೀಪಾ ಕಂಚಿನ ಪದಕ ಗೆದ್ದಿದ್ದರು.
- ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
- ಅಷ್ಟೇ ಅಲ್ಲ, 2015ರಲ್ಲಿ ಹಿರೋಷಿಮಾದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.
- ಅವರು 2015 ರ ವರ್ಲ್ಡ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 5 ನೇ ಸ್ಥಾನ ಪಡೆದರು.
ಬೆಂಬಿಡದ ವಿವಾದಗಳು
ಇತ್ತೀಚೆಗೆ ದೀಪಾ ಅವರು ಇಂಜುರಿ ಮತ್ತು ಡೋಪಿಂಗ್ ಅಮಾನತು ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಿದರು. ಅವರು ಎರಡು ಬಾರಿ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ ಕೂಡ ಅವರನ್ನು 21 ತಿಂಗಳ ಕಾಲ ಅಮಾನತುಗೊಳಿಸಿತ್ತು. ಇದಾದ ನಂತರ ದೀಪಾ ಕಮ್ ಬ್ಯಾಕ್ ಮಾಡಿದರು. ಮೇ 2024 ರಲ್ಲಿ ತಾಷ್ಕೆಂಟ್‌ನಲ್ಲಿ ನಡೆದ ಮಹಿಳೆಯರ ವಾಲ್ಟ್ ಈವೆಂಟ್‌ನಲ್ಲಿ 13.566 ಅಂಕಗಳೊಂದಿಗೆ ಅಗ್ರಸ್ಥಾನ ಪಡೆಯುವ ಮೂಲಕ ದೀಪಾ ಏಷ್ಯನ್ ಸೀನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಜಿಮ್ನಾಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಈ ಸುದ್ದಿಯನ್ನೂ ಓದಿ: ರಾಜೇಂದ್ರ ಭಟ್ ಅಂಕಣ: ಕ್ರೀಡೆಗಿಂತ ಕ್ರೀಡಾ ಮನೋಭಾವ ದೊಡ್ಡದು ಎಂದು ಸಾಬೀತು ಮಾಡಿದ ಗುಂಡಪ್ಪ ವಿಶ್ವನಾಥ್!