Sunday, 15th December 2024

ಡಿಸ್ನಿಯಲ್ಲಿ 4,000 ಉದ್ಯೋಗಿಗಳ ವಜಾ

ಮುಂಬೈ: ಗೂಗಲ್, ಮೆಟಾ, ಮೈಕ್ರೋಸಾಫ್ಟ್ ಮತ್ತು ಇತರೆ ದೊಡ್ಡ ಸಂಸ್ಥೆಗಳು ಕಳೆದ ವರ್ಷ ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ಉದ್ಯೋಗ ಕಡಿತವನ್ನು ಆರಂಭಿಸಿದೆ.

ಮನರಂಜನಾ ಸಂಸ್ಥೆ ಡಿಸ್ನಿ ತನ್ನ ಎರಡನೇ ಹಂತದ ಉದ್ಯೋಗ ಕಡಿತವನ್ನು ಆರಂಭ ಮಾಡಿದೆ. ಈ ಉದ್ಯೋಗ ಕಡಿತವು 4,000 ಉದ್ಯೋಗಿಗಳ ಮೇಲೆ ಪ್ರಭಾವ ಉಂಟು ಮಾಡಿದೆ. ಫೆಬ್ರವರಿಯಲ್ಲಿ 7000 ಮಂದಿಯನ್ನು ಉದ್ಯೋಗದಿಂದ ವಜಾಗೊಳಿಸಿದ್ದ ಡಿಸ್ನಿ ಸಂಸ್ಥೆಯು ಏಪ್ರಿಲ್‌ನಲ್ಲಿ 4000 ಮಂದಿಯನ್ನು ವಜಾಗೊಳಿಸಲಿದೆ ಎಂದು ಮಾರ್ಚ್‌ ನಲ್ಲಿಯೇ ವರದಿಯಾಗಿದೆ.

ಮಾಧ್ಯಮಗಳ ವರದಿಯ ಪ್ರಕಾರ ಈ ಮನರಂಜನಾ ಪ್ಲಾಟ್‌ಫಾರ್ಮ್ ಸಂಸ್ಥೆಯಲ್ಲಿ ಪುನರ್‌ ರಚನೆ ಮಾಡುವ ಉದ್ದೇಶದಿಂದ ಏಳು ಸಾವಿರ ಮಂದಿಯನ್ನು ಉದ್ಯೋಗದಿಂದ ತೆಗೆದು ಹಾಕಲು ಸಜ್ಜಾಗುತ್ತಿದೆ. ಸುಮಾರು 5.5 ಬಿಲಿಯನ್ ಡಾಲರ್ ಮೊತ್ತವನ್ನು ಉಳಿತಾಯ ಮಾಡುವ ನಿಟ್ಟಿನಲ್ಲಿ ಈ ಉದ್ಯೋಗ ಕಡಿತವನ್ನು ಸಂಸ್ಥೆಯು ಮಾಡುತ್ತಿದೆ ಎಂದು ಕೂಡಾ ವರದಿಯು ಉಲ್ಲೇಖಿಸಿದೆ.