ಹೊಸದಿಲ್ಲಿ: ಭಾರತದ ಬಹು ಮುಖ್ಯ ಹಬ್ಬಗಳಲ್ಲಿ ಒಂದಾದ ದೀಪಾವಳಿ (Deepavali) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಬೆಳಕಿನ ಹಬ್ಬಕ್ಕೆ 1 ವಾರ ಬಾಕಿ ಉಳಿದಿದ್ದು, ಈಗಾಗಲೇ ಸಿದ್ದತೆ ನಡೆಸಲಾಗುತ್ತಿದೆ. ಹಬ್ಬದ ಪ್ರಯುಕ್ತ ಬ್ಯಾಂಕ್‌ಗಳಿಗೆ ನಿರಂತರ 3 ದಿನ ರಜೆ ಇರಲಿದೆ. ಈ ಕುರಿತಾದ ವಿವರ ಇಲ್ಲಿದೆ (Diwali Bank Hoildays 2024).
ನವೆಂಬರ್ 1ರಿಂದ ಬ್ಯಾಂಕ್‌ಗಳಿಗೆ ನಿರಂತರ ರಜೆ ಇರಲಿದೆ. ರಿಸರ್ವ್ ಬ್ಯಾಂಕ್ ಇಂಡಿಯಾ ಸಾರ್ವಜನಿಕ ರಂಗದ ಮತ್ತು ಖಾಸಗಿ ಬ್ಯಾಂಕ್‌ಗಳಿಗೆ ರಜೆ ಘೋಷಿಸಿ ಪ್ರಕಟಣೆ ಹೊರಡಿಸಿದೆ. ಆಯಾ ರಾಜ್ಯಗಳಲ್ಲಿ ಆಚರಿಸಲಾಗುವ ಹಬ್ಬಕ್ಕೆ ಅನುಗುಣವಾಗಿ ರಜೆಯನ್ನು ಘೋಷಿಸಲಾಗಿದೆ. ಈ ಪೈಕಿ ಕರ್ನಾಟಕದಲ್ಲಿ 3 ದಿನ ಬ್ಯಾಂಕ್ ಬಂದ್ ಆಗಿರಲಿದೆ.
ಯಾವಾಗೆಲ್ಲ ರಜೆ?
ಸಾಮಾನ್ಯವಾಗಿ ದೀಪಾವಳಿಯನ್ನು 5 ದಿನಗಳ ಕಾಲ ಆಚರಿಸಲಾಗುತ್ತದೆ. ಈ ಬಾರಿ ಅಕ್ಟೋಬರ್ 30ರಂದು ಧಂತೇರಸ್ ಮೂಲಕ ಹಬ್ಬಕ್ಕೆ ಮುನ್ನುಡಿ ಬರೆಯಾಗುತ್ತದೆ. ಅಂದು ಬ್ಯಾಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ನವೆಂಬರ್ 1, ನವೆಂಬರ್ 2 ಕರ್ನಾಟಕದಲ್ಲಿ ಬ್ಯಾಂಕ್‌ಗಳಿಗೆ ರಜೆ ಸಾರಲಾಗಿದೆ. ಭಾನುವಾರವಾದ ನವೆಂಬರ್ 3 ಸಾರ್ವತ್ರಿಕ ರಜೆ ಇರಲಿದೆ.
ರಜೆಗಳ ಪಟ್ಟಿ
ದಿನಾಂಕ | ಹಬ್ಬ | ರಜೆ ಇರುವ ರಾಜ್ಯಗಳು |
ಅಕ್ಟೋಬರ್ 31 | ದೀಪಾವಳಿ / ಕಾಳಿ ಪೂಜೆ / ನರಕ ಚತುರ್ದಶಿ/ ಸರ್ದಾರ್ ವಲ್ಲಭಭಾಯಿ ಪಟೇಲ್ ಹುಟ್ಟುಹಬ್ಬ | ಆಂಧ್ರ ಪ್ರದೇಶ, ಗೋವಾ, ಕೇರಳ, ಪಾಂಡಿಚೇರಿ, ತೆಲಂಗಾಣ ಮತ್ತು ತಮಿಳುನಾಡು |
ನವೆಂಬರ್ 1 | ದೀಪಾವಳಿ ಅಮಾವಾಸ್ಯೆ (ಲಕ್ಷ್ಮೀ ಪೂಜೆ) / ದೀಪಾವಳಿ / ಕಟ್ / ಕರ್ನಾಟಕ ರಾಜ್ಯೋತ್ಸವ | ಕರ್ನಾಟಕ, ತ್ರಿಪುರಾ, ಬೇಲಾಪುರ, ಉತ್ತರಾಖಾಂಡ, ಸಿಕ್ಕಿಂ, ಮಣಿಪುರ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ ಮತ್ತು ಮೇಘಾಲಯ |
ನವೆಂಬರ್ 2 | ಬಲಿ ಪಾಡ್ಯಮಿ / ಲಕ್ಷ್ಮೀ ಪೂಜೆ / ಗೋವರ್ಧನ ಪೂಜೆ / ವಿಕ್ರಂ ಸಾವಂತ್ ಹೊಸ ವರ್ಷ | ಕರ್ನಾಟಕ, ಗುಜರಾತ್, ಉತ್ತರಾಖಂಡ, ಸಿಕ್ಕಿಂ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ |
ನವೆಂಬರ್ 3 | ಭಾಯಿ ದೂಜ್ / ಭಾನುವಾರ | ಸಾರ್ವತ್ರಿಕ ರಜೆ |
ನಗದು ಅಗತ್ಯವಿದ್ದರೆ ಏನು ಮಾಡಬೇಕು?
ಹಬ್ಬದ ವೇಳೆ ನಗದು ಅಗತ್ಯವಿದ್ದರೆ ಚಿಂತಿಸಬೇಕಾಗಿಲ್ಲ. ಬ್ಯಾಂಕ್‌ಗೆ ರಜೆ ಇದ್ದರೂ ಆನ್‌ಲೈನ್ ಬ್ಯಾಂಕಿಂಗ್ ಸೇವೆ, ಎಟಿಎಂಗಳು ಎಂದಿನಂತೆ 24X7 ಕಾರ್ಯ ನಿರ್ವಹಿಸಲಿದೆ.
ರಜಾದಿನಗಳ ವಿಧಗಳು
ಭಾರತದಲ್ಲಿ ಬ್ಯಾಂಕ್ ರಜಾ ದಿನಗಳನ್ನು ಎರಡಾಗಿ ವಿಭಾಗಿಸಲಾಗಿದೆ. ಅವುಗಳೆಂದರೆ ರಾಷ್ಟ್ರೀಯ ರಜಾದಿನಗಳು ಮತ್ತು ಸರ್ಕಾರಿ ರಜಾ ದಿನಗಳು. ರಿಪಬ್ಲಿಕ್ ಡೇ, ಸ್ವಾತಂತ್ರ್ಯೋತ್ಸವ ಮತ್ತು ಗಾಂಧಿ ಜಯಂತಿಯನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಹೀಗಾಗಿ ಅಂದು ದೇಶದಲ್ಲಿರುವ ಎಲ್ಲ ಬ್ಯಾಂಕ್, ಶಾಲೆ-ಕಾಲೇಜು, ಸರ್ಕಾರಿ ಕಚೇರಿ ಮತ್ತು ಹೆಚ್ಚಿನ ಎಲ್ಲಖಾಸಗಿ ಕಚೇರಿಗಳಿಗೆ ರಜೆ ಸಾರಲಾಗುತ್ತದೆ. ಇನ್ನು ಸರ್ಕಾರಿ ರಜೆಯನ್ನು ಆಯಾ ರಾಜ್ಯಕ್ಕೆ ಅನುಗುಣವಾಗಿ ಘೋಷಿಸಲಾಗುತ್ತದೆ. ಉದಾಹರಣೆಗೆ ಹಿಮಾಚಲ ಡೇಯಂದು ಹಿಮಾಚಲ ಪ್ರದೇಶದಲ್ಲಿ ಮಾತ್ರ ರಜೆ ಇರುತ್ತದೆ. ಓಣಂ ದಿನದಂದು ಕೇರಳಕ್ಕೆ ಮಾತ್ರ ರಜೆ ಘೋಷಿಸಲಾಗುತ್ತದೆ.
ಈ ಸುದ್ದಿಯನ್ನೂ ಓದಿ: PM Internship Scheme: ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ; 280 ಕಂಪನಿಗಳಿಂದ 1.27 ಲಕ್ಷ ಯುವ ಜನರಿಗೆ ಅವಕಾಶ