Sunday, 15th December 2024

ಪುದುಚೇರಿ ಚುನಾವಣೆ: ಡಿಎಂಕೆ 12 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಚೆನ್ನೈ: ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಮುಂದಿನ ಏಪ್ರಿಲ್ 6ರಂದು ನಡೆಯಲಿರುವ ವಿಧಾನಸಭಾ ಚಯ 13 ಕ್ಷೇತ್ರಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಡಿಎಂಕೆ ಶನಿವಾರ ಬಿಡುಗಡೆ ಮಾಡಿದ್ದು, 12 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.

ಡಿಎಂಕೆ ಪಕ್ಷ ಉರುಲಯನ್‌ಪೆಟ್ಟೈ, ಮುದಲಿಯಾರ್‌ಪೆಟ್ಟೈ, ರಾಜಭವನ ಸೇರಿದಂತೆ ಹನ್ನೆರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತು. ಬಾಗೂರ್ ಕ್ಷೇತ್ರದ ಅಭ್ಯರ್ಥಿಯನ್ನು ನಂತರ ಘೋಷಿಸಲಾಗುತ್ತದೆ.