Thursday, 12th December 2024

ಡಿಎಂಕೆ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ

ಚೆನ್ನೈ : ತಮಿಳುನಾಡಿನ ಸಚಿವ ಉದಯ್ ಸ್ಟಾಲಿನ್ ಹಾಗೂ ಸಂಸದ ಎ.ರಾಜ ಸನಾತನ ಧರ್ಮದ ವಿಚಾರವಾಗಿ ಅವಹೇಳನಕಾರಿ ಹೇಳಿಕೆ ನೀಡಿದ್ದರಿಂದ ಸುಪ್ರೀಂಕೋರ್ಟ್ ಡಿಎಂಕೆ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಸನಾತನ ಧರ್ಮದ ಬಗ್ಗೆ ಉದಯ ನಿಧಿ ಸನಾತನ ಧರ್ಮವು ಒಂದು ಕರೋನ ಡೇಂಗಿ ಹಾಗೂ ಮಲೇರಿಯಾ ರೋಗವಿದ್ದಂತೆ ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಕಳೆದ ಹಲವು ದಿನಗಳ ಹಿಂದೆ ಹೇಳಿಕೆ ನೀಡಿದ್ದರು.

ಉದಯ ನಿಧಿ ಸ್ಟಾಲಿನ್ ಅವರ ಹೇಳಿಕೆಗೆ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದ್ದು, ಹಿಂದೂ ಪರ ಸಂಘಟನೆಗಳು ಸೇರಿದಂತೆ ಅನೇಕ ಸಂಘಟನೆಗಳು ಸ್ಟಾಲಿನ್ ಅವರ ಹೇಳಿಕೆಯನ್ನು ವಿರೋಧಿಸಿದ್ದವು. ಅಲ್ಲದೆ ದೇಶಾದ್ಯಂತ ವಿವಿಧ ಕಡೆಗಳಲ್ಲಿ ಉದಯ ನಿಧಿ ಅವರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಕೂಡ ದಾಖಲಾಗಿದ್ದವು.