Monday, 16th September 2024

‘ಲೋಕ’ ಚುನಾವಣೆ: ಡಿಎಂಕೆ 21 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಚೆನ್ನೈ: ಲೋಕಸಭೆ ಚುನಾವಣೆಗಾಗಿ ಆಡಳಿತರೂಢ ದ್ರಾವಿಡ ಮುನ್ನೇತ್ರ ಕಳಗಂ 21 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ.

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿ, ಇದು ಡಿಎಂಕೆ ಪ್ರಣಾಳಿಕೆ ಮಾತ್ರವಲ್ಲ, ಜನರ ಪ್ರಣಾಳಿಕೆ. 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಭಾರತ ಅಭಿವೃದ್ಧಿ ಕ್ಷೀಣಿಸಿದೆ ಎಂದು ಹೇಳಿದರು.

ಬಿಜೆಪಿ ತನ್ನ ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಗಳಲ್ಲಿ ಯಾವುದನ್ನೂ ಈಡೇರಿಸಲಿಲ್ಲ. ನಾವು ಭಾರತ ಮೈತ್ರಿಕೂಟವನ್ನು ರಚಿಸಿದ್ದೇವೆ ಮತ್ತು 2024 ರಲ್ಲಿ ನಾವು ನಮ್ಮ ಸರ್ಕಾರವನ್ನು ರಚಿಸುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.

ಪ್ರಣಾಳಿಕೆಯಲ್ಲಿ ತಮಿಳುನಾಡಿಗೆ ವಿಶೇಷ ಯೋಜನೆಗಳನ್ನು ಘೋಷಿಸಿದ್ದೇವೆ. ಪ್ರತಿ ಜಿಲ್ಲೆಯ ಅಬಿವೃದ್ಧಿ ದೃಷ್ಟಿಯಿಂದ ಹಲವು ಯೋಜನೆಗಳನ್ನು ಈ ಪ್ರಣಾಳಿಕೆಯಲ್ಲಿ ನೀಡಲಾಗಿದೆ. ಚುನಾವಣೆಗೂ ಮುನ್ನ ಡಿಎಂಕೆ ಪ್ರಕಟಿಸಿದ ಪ್ರಣಾಳಿಕೆಗಳನ್ನು ನಾವು ಈಡೇರಿಸುತ್ತೇವೆ. ತಮಿಳುನಾಡಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ನೀಟ್ ಅನ್ನು ಜಾರಿಗೆ ತರುವುದಿಲ್ಲ. ಹಾಗೂ ಪ್ರಮುಖವಾಗಿ ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಯುಸಿಸಿ ಜಾರಿ ಯಾಗುವುದಿಲ್ಲ ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ ಎಂದು ಹೇಳಿದರು.

ಮುಂಬರುವ ಲೋಕಸಭಾ ಚುನಾವಣೆಗೆ 12 ಹೊಸ ಅಭ್ಯರ್ಥಿಗಳು ಸೇರಿದಂತೆ 21 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಡಿಎಂಕೆ ಬಿಡುಗಡೆ ಮಾಡಿದೆ. ಹಾಲಿ ಸಂಸದರಾದ ಕನ್ನಿಮೊಳಿ ತೂತುಕುಡಿಯಿಂದ ಸ್ಪರ್ಧಿಸಲಿದ್ದಾರೆ. ಉತ್ತರ ಚೆನ್ನೈನಿಂದ ಕಲಾನಿಧಿ ವೀರಸಾಮಿ, ದಕ್ಷಿಣ ಚೆನ್ನೈನಿಂದ ತಮಿಳಚಿ ತಂಗಪಾಂಡಿಯನ್, ಸೆಂಟ್ರಲ್ ಚೆನ್ನೈನಿಂದ ದಯಾನಿಧಿ ಮಾರನ್, ಶ್ರೀಪೆರುಂಬತ್ತೂರಿನಿಂದ ಟಿಆರ್ ಬಾಲು, ಅರಕೋಣಂನಿಂದ ಜಗತ್ರಾಚಾಹನ್ ಮತ್ತು ವೆಲ್ಲೂರಿನಿಂದ ಕಂಧೀರ್ ಅವರನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ ಎಂದು ಹೇಳಿದರು.

21 ಅಭ್ಯರ್ಥಿಗಳ ಪೈಕಿ 11 ಹೊಸ ಮುಖಗಳಿಗೆ ಡಿಎಂಕೆ ಅವಕಾಶ ಕಲ್ಪಿಸಿದೆ.

Leave a Reply

Your email address will not be published. Required fields are marked *