Thursday, 19th September 2024

527 ಕೆಜಿ ಡೋದಾ ಪೋಸ್ಟ್ ಮಾದಕ ವಸ್ತು ವಶ: ಒಬ್ಬನ ಬಂಧನ

ಹಿಸ್ಸಾರ್‌ (ಹರ್ಯಾಣ): ಮಹತ್ವದ ಕಾರ‍್ಯಾಚರಣೆಯಲ್ಲಿ ಹರ‍್ಯಾಣ ಪೊಲೀಸರು ಮಂಗಳವಾರ 527 ಕೆಜಿ 800 ಗ್ರಾಂ ಡೋದಾ ಪೋಸ್ಟ್ ಎಂಬ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಮಂಗಲಿ-ಕೈಮ್ರಿ ರಸ್ತೆಯಲ್ಲಿ ಪೊಲೀಸರ ಕಾರ‍್ಯಾಚರಣೆ ವೇಳೆ ಹಿಸ್ಸಾರ್‌ ಜಿಲ್ಲೆಯಲ್ಲಿ ಟ್ರಕ್‌ನಲ್ಲಿ ಸಾಗಿಸುತ್ತಿದ್ದ ವೇಳೆ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಫತೇಹಾಬಾದ್‌ನ ರಾಜೇಂದರ್‌ ಎಂದು ಗುರುತಿಸಲಾಗಿದೆ.

ಎನ್‌ಡಿಪಿಎಸ್‌ ಕಾಯ್ದೆಯಡಿಯಲ್ಲಿ ಆರೋಪಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ.