Wednesday, 11th December 2024

ದಾಹೋದ್-ಆನಂದ್ ಮೆಮು ರೈಲಿನ ಬೋಗಿಗಳಲ್ಲಿ ಬೆಂಕಿ: ಪ್ರಯಾಣಿಕರು ಪಾರು

ದೋಹಾ: ಗುಜರಾತ್‌ನ ದಾಹೋದ್ ಜಿಲ್ಲೆಯ ಜಾಕೋಟ್ ನಿಲ್ದಾಣದಲ್ಲಿ  ದಾಹೋದ್-ಆನಂದ್ ಮೆಮು ರೈಲಿನ ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಡೆದಿದೆ.

ಸಣ್ಣ ಮತ್ತು ಮಧ್ಯಮ-ದೂರ ಮಾರ್ಗಗಳಿಗೆ ಬಳಸಲಾಗುವ ಎಲೆಕ್ಟ್ರಿಕ್ ಬಹು-ಘಟಕ ರೈಲು MEMU, ಜಾಕೋಟ್ ನಿಲ್ದಾಣದಲ್ಲಿ ಬೆಂಕಿ ಸಂಭವಿಸಿದ ಸಂದರ್ಭ ದಲ್ಲಿ ಗೋಧ್ರಾ ಕಡೆಗೆ ಹೋಗುತ್ತಿತ್ತು.

ರೈಲಿನಲ್ಲಿ ಬೆಂಕಿ ಹೊತ್ತಿಕೊಂಡಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ವಿಡಿಯೋದಲ್ಲಿ, ರೈಲು ಬೆಂಕಿಯಿಂದ ಧಗಧಗಿಸುತ್ತಿದ್ದು, ಪ್ರಯಾಣಿಕರೆಲ್ಲರೂ ರೈಲಿನಿಂದ ಕೆಳಗಿಳಿದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಅದೃಷ್ಟವಶಾತ್ ಈ ಘಟನೆಯಿಂದ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.