ನವದೆಹಲಿ: ಸರ್ಕಾರಿ ಸ್ವಾಮ್ಯದ ದೂರದರ್ಶನಕ್ಕೆ ಹೊಸ ಲೋಗೋ ಪರಿಚಯಿಸಲಾಗಿದ್ದು, ಕೇಸರಿ ಬಣ್ಣ ನೀಡಲಾಗಿದೆ. ಕೇಸರಿ ಬಣ್ಣದಲ್ಲಿ ಲೋಗೋ ವಿನ್ಯಾಸ ಮಾಡಲಾಗಿರುವುದರ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗತೊಡಗಿದೆ.
ಈ ಹಿಂದೆ ಕೆಂಪು ಬಣ್ಣದಲ್ಲಿ ಲೋಗೋ ವಿನ್ಯಾಸ ಮಾಡಲಾಗಿತ್ತು.
ದೂರದರ್ಶನ ಚಾನಲ್ ನ ಇಂಗ್ಲೀಷ್ ಸುದ್ದಿ ವಿಭಾಗ ಡಿಡಿ ನ್ಯೂಸ್ ಹೊಸ ಲೋಗೋವನ್ನೊಳಗೊಂಡ ಪ್ರಚಾರದ ವೀಡಿಯೊ ವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿತ್ತು.
ನಾವು ಈಗ ಹೊಸ ಅವತಾರದಲ್ಲಿ ಲಭ್ಯವಿದ್ದೇವೆ. ಹಿಂದೆಂದಿಗಿಂತಲೂ ವಿಭಿನ್ನವಾದ ಸುದ್ದಿ ಪ್ರಯಾಣಕ್ಕೆ ಸಿದ್ಧರಾಗಿ… ಹೊಸ ಡಿಡಿ ನ್ಯೂಸ್ ನ ಅನುಭೂತಿ ಪಡೆಯಿರಿ ಎಂದು ಶೀರ್ಷಿಕೆಯಲ್ಲಿ ದೂರದರ್ಶನ ಹೇಳಿತ್ತು.
ಹೊಸ ಲೋಗೋ ಸಾಮಾಜಿಕ ಜಾಲತಾಣಗಳಲ್ಲು ಹಲವು ಟೀಕೆಗಳನ್ನು ಎದುರಿಸಿತು ಮತ್ತು ಹಲವಾರು ಬಳಕೆದಾರರು ಇದು ಕೇಸರಿ ಬಣ್ಣವಾಗಿದ್ದು ಈ ಕ್ರಮ ಚುನಾವಣೆಯ ಮುಂಚೆಯೇ ಬಂದಿದೆ. ದೂರದರ್ಶನದ ಮಾತೃಸಂಸ್ಥೆಯ ಮಾಜಿ ಮುಖ್ಯಸ್ಥ, ಹಾಲಿ ತೃಣಮೂಲ ಕಾಂಗ್ರೆಸ್ ಸಂಸದ ಜವಾಹರ್ ಸಿರ್ಕಾರ್ ಕೂಡ ಚುನಾವಣೆಗೆ ಮುನ್ನ ದೂರದರ್ಶನದ ಲೋಗೋದ “ಕೇಸರಿಕರಣ”ವನ್ನು ನೋಡುವುದು ನೋವುಂಟುಮಾಡುತ್ತದೆ ಎಂದು ಹೇಳಿದ್ದಾರೆ.
ಸರ್ಕಾರ್ ದೂರದರ್ಶನ ಮತ್ತು ಆಲ್ ಇಂಡಿಯಾ ರೇಡಿಯೊವನ್ನು ಮೇಲ್ವಿಚಾರಣೆ ಮಾಡುವ ಶಾಸನಬದ್ಧ ಸಂಸ್ಥೆ ಪ್ರಸಾರ ಭಾರತಿಯ ಸಿಇಒ ಆಗಿ 2012 ರಿಂದ 2016 ರವರೆಗೆ ಸೇವೆ ಸಲ್ಲಿಸಿದ್ದರು.