Saturday, 14th December 2024

ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ಸೋರಿಕೆ: ಡಿಆರ್‌ಡಿಓ ಕಾರ್ಮಿಕರ ಬಂಧನ

ಭುವನೇಶ್ವರ: ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ಸೋರಿಕೆ ಮಾಡಿದ ಆರೋಪದಲ್ಲಿ ಒಡಿಸ್ಸಾ ಕರಾವಳಿಯ ಕ್ಷಿಪಣಿ ಪರೀಕ್ಷಾ ಕೇಂದ್ರ (ಡಿಆರ‍್‌ಡಿಓ) ದ ನಾಲ್ವರನ್ನು  ಬಂಧಿಸಲಾಗಿದೆ.

ಬೇಹುಗಾರಿಕೆ ಮಾಹಿತಿ ಹಿನ್ನೆಲೆಯಲ್ಲಿ ಐಜಿ (ಪೂರ್ವ ವಲಯ) ಹಿಮಾಂಶು ಲಾಲ್ ನೇತೃತ್ವದ ಒಡಿಶಾ ಪೊಲೀಸರ ವಿಶೇಷ ತಂಡ ಚಾಂಡಿಪುರ ಸಮುದ್ರದಲ್ಲಿ ರುವ ಡಿಆರ್ಡಿಒನ ಘಟಕ ಸಂಯೋಜಿತ ಪರೀಕ್ಷಾ ವಲಯದಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ನಾಲ್ವರನ್ನು ಬಂಧಿಸಿದೆ.

ಪರೀಕ್ಷಾ ಕೇಂದ್ರದಲ್ಲಿ ನಡೆಯುವ ಚಟುವಟಿಕೆಯ ಮಾಹಿತಿಗಾಗಿ ಗುತ್ತಿಗೆ ಕಾರ್ಮಿಕರನ್ನು ಹನಿ ಟ್ರಾಪ್ಗೆ ಒಳಪಡಿಸ ಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿದೆ.

ಫೇಸ್ಬುಕ್ ಮೆಸೆಂಜರ್ ಮೂಲಕ ನಾವು ಮೊದಲ ಸಂದೇಶ ಸ್ವೀಕರಿಸಿದೆವು. ಏಜೆಂಟ್ಗಳು ನಕಲಿ ಹೆಸರು ಬಳಸಿ ದರು. ರಹಸ್ಯ ಮಾಹಿತಿಗೆ ಪರ್ಯಾಯವಾಗಿ ಹಣ ವರ್ಗಾವಣೆ ಮಾಡಿದರು.

ಮೂರು ದಿನಗಳ ಕಾಲ ಶೋಧಿಸಿದ ಬಳಿಕ ಚಾಂಡಿಪುರ ವ್ಯಾಪ್ತಿಯಲ್ಲಿರುವ ಮನೆಯಿಂದ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.