Sunday, 15th December 2024

ಮತ್ತೆ ಶಂಕಿತ ಡ್ರೋನ್ ನೆಲಕ್ಕುರುಳಿಸಿದ ಬಿಎಸ್ಎಫ್ ಯೋಧರು

ಜಮ್ಮು: ಭಾರತ-ಪಾಕಿಸ್ತಾನ ಗಡಿಯಲ್ಲಿ ಮತ್ತೆ ಶಂಕಿತ ಡ್ರೋನ್ ಹಾರಾಟ ಘಟನೆ ನಡೆದಿದ್ದು, ಎಚ್ಚೆತ್ತ ಬಿಎಸ್ ಎಫ್ ಯೋಧರು ಗುಂಡು ಹಾರಿಸಿ ನೆಲಕ್ಕುರುಳಿಸಿ ದ್ದಾರೆ.

ಅರ್ನಿಯಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಸೋಮವಾರ ಭಾರತದತ್ತ ಬರುತ್ತಿದ್ದ ಶಂಕಿತ ಹಾರುವ ವಸ್ತುವೊಂದನ್ನು ಗುರುತಿಸಿದ ಗಡಿ ಭದ್ರತಾ ಪಡೆಯ ಸಿಬ್ಬಂದಿ ಅದರತ್ತ ಗುಂಡು ಹಾರಿಸಿದ್ದಾರೆ. ಆಗಸದಲ್ಲಿ ಕೆಂಪು ಮತ್ತು ಹಳದಿ ಬಣ್ಣದ ಬೆಳಕಿನ ಮಿಣುಕುತ್ತಿರುವುದು ಕಾಣಿಸಿತು. ಬಿಎಸ್‌ಎಫ್‌ ಸಿಬ್ಬಂದಿ ಅದರತ್ತ ಗುಂಡು ಹಾರಿಸಿದರು. ಹಾರುವ ವಸ್ತು ಬಳಿಕ ಪಾಕಿಸ್ತಾನದತ್ತ ಬಿದ್ದಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಹಾರಿದ ವಸ್ತು ಡ್ರೋನ್ ಇರಬಹುದು ಎಂಬ ಶಂಕೆ ಇದ್ದು, ಪೊಲೀಸರ ನೆರವಿನಿಂದ ಸ್ಥಳವನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.