Sunday, 15th December 2024

₹602 ಕೋಟಿ ಮೌಲ್ಯದ ಮಾದಕ ವಸ್ತು ಪತ್ತೆ: 14 ಪಾಕಿಸ್ತಾನ ಪ್ರಜೆಗಳ ಬಂಧನ

ಗಾಂಧಿನಗರ: ಗುಜರಾತ್​ ಕರಾವಳಿಯಲ್ಲಿ ಬರೋಬ್ಬರಿ ₹602 ಕೋಟಿ ಮೌಲ್ಯದ ಮಾದಕ ವಸ್ತುಗಳು ಪತ್ತೆಯಾಗಿದ್ದು, 14 ಮಂದಿ ಪಾಕಿಸ್ತಾನದ ಪ್ರಜೆಗಳನ್ನು ಬಂಧಿಸಲಾಗಿದೆ.

ಭಯೋತ್ಪಾದನಾ ನಿಗ್ರಹ ದಳ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಲಾಗಿದೆ.

ಕಾರ್ಯಾಚರಣೆಯ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಪಾಕಿಸ್ತಾನಿ ಪ್ರಜೆಗಳು, ಎಟಿಎಸ್ ಅಧಿಕಾರಿಗಳ ಮೇಲೆ ದೋಣಿ ಚಲಾಯಿಸಲು ಪ್ರಯತ್ನಿಸಿ ದರು.

ಭದ್ರತಾ ಏಜೆನ್ಸಿಗಳು ಕಳೆದ ಎರಡು ದಿನಗಳಿಂದ ಅಂತರಾಷ್ಟ್ರೀಯ ಸಮುದ್ರ ಗಡಿಯ ಬಳಿ ಅಂದರೆ ಭಾರತದ ಪ್ರಾದೇಶಿಕ ಜಲ ವ್ಯಾಪ್ತಿಯಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದವು.