Friday, 19th April 2024

ಕಲುಷಿತ ನೀರು ಸೇವಿಸಿ ಆರು ಸಾವು, 50 ಜನ ಆಸ್ಪತ್ರೆಗೆ ದಾಖಲು

ಸೂರತ್ : ಕಲುಷಿತ ಕುಡಿಯುವ ನೀರು ಸೇವಿಸಿ ಆರು ಜನರು ಮೃತಪಟ್ಟು 50 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೂರತ್ ನಗರದ ಕಥೋರ್ ಗ್ರಾಮದಲ್ಲಿ ಘಟನೆ ಸಂಭವಿಸಿದೆ.

ಸೂರತ್ ಮುನ್ಸಿಪಲ್ ಕಾರ್ಪೊರೇಷನ್ ನ ಆರೋಗ್ಯ ಅಧಿಕಾರಿಗಳು ವಿವೇಕ್ ನಗರ ಕಾಲೋನಿಯನ್ನು ತಲುಪಿ ಗ್ರಾಮಸ್ಥರಿಗೆ ಕ್ಲೋರಿನ್ ಔಷಧಿ ವಿತರಿಸುವ ಘಟನೆ ನಡೆದಿದೆ.

ಗ್ರಾಮಸ್ಥರು ವಾಂತಿ ಮತ್ತು ಅತಿಸಾರದಂತಹ ರೋಗಲಕ್ಷಣಗಳಿಂದ ಬಳಲು ತ್ತಿದ್ದರು. ಸೋಂಕಿತ ಗ್ರಾಮಸ್ಥರಿಗೆ ಹತ್ತಿರದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಲುಷಿತ ನೀರಿನ ಸೇವನೆಯಿಂದ ಗ್ರಾಮಸ್ಥರು ಅನಾರೋಗ್ಯಕ್ಕೆ ಒಳಗಾದರು. ತಪಾಸಣೆಯ ಸಮಯದಲ್ಲಿ, ಕುಡಿಯುವ ನೀರಿನ ಪೈಪ್ ಲೈನ್ ನಲ್ಲಿ ಸೋರಿಕೆಯಾಗಿದೆ ಮತ್ತು ಅದು ಒಳಚರಂಡಿ ನೀರಿ ನೊಂದಿಗೆ ಬೆರೆತಿದೆ ಎಂದು ತಿಳಿದುಬಂದಿದೆ.

ಸೂರತ್ ಮೇಯರ್ ಹೆಮಾಲಿ ವೊಘಾವಾಲಾ ಅವರು ಬುಧವಾರ ಪರಿಸ್ಥಿತಿಯನ್ನು ಅವಲೋಕಿಸಿದರು ಮತ್ತು ಮೃತರ ಸಂಬಂಧಿಕರಿಗೆ ೧ ಲಕ್ಷ ರೂ.ಗಳನ್ನು ಘೋಷಿಸಿದರು.

Leave a Reply

Your email address will not be published. Required fields are marked *

error: Content is protected !!